ಪ್ರಧಾನ ಸುದ್ದಿ

ಪ್ಲಾಸ್ಟಿಕ್ ನಿಷೇಧ: ಗೊಂದಲದ ಉತ್ತರ ನೀಡಿದ ಸಚಿವ ರೈ

Shilpa D

ವಿಧಾನ ಪರಿಷತ್: ಪ್ಲಾಸ್ಟಿಕ್ ಉತ್ಪಾದನೆ, ಬಳಕೆ ನಿಷೇಧ ಕುರಿತು ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದರೂ ಮತ್ತೊಮ್ಮೆ ಈ ವಿಚಾರವನ್ನು ಕ್ಯಾಬಿನೆಟ್ ಮುಂದೆ ತರುವ ಅಗತ್ಯವೇನಿದೆ ಎಂದು ಬಿಜೆಪಿ ಸದಸ್ಯ ನಾರಾಯಣ ಸ್ವಾಮಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಪ್ರಶ್ನೋತ್ತರ ವೇಳೆಯಲ್ಲಿ ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ನಾರಾಯಣಸ್ವಾಮಿ ಯವರು, ಕರಡು ಅಧಿಸೂಚನೆ ಹೊರಡಿಸಿದ 30 ದಿನಗಳ ತರುವಾಯ ಸಂಪ್ರದಾಯದಂತೆ ಅದು ಕಾಯ್ದೆಯಾಗಿ ಜಾರಿಯಾಗುತ್ತದೆ. ಆದರೆ, ಸಚಿವ ಸಂಪುಟದ ಮುಂದೆ ಮತ್ತೆ ಪ್ರಸ್ತಾಪ ಬರುವ ಬಗ್ಗೆ ಮಾಹಿತಿ ಬಂದಿದ್ದು, ಇದರ ಅಗತ್ಯ ವೇನಿತ್ತು ಎಂದು ಪ್ರಶ್ನಿಸಿದರು.

ಇದಕ್ಕುತ್ತರಿಸಿದ ಸಚಿವ ರಮಾನಾಥ ರೈ, ಬುದ್ಧಿವಂತ ಪ್ರಶ್ನೆ ಕೇಳಬೇಡಿ ಎಂದು ಗೊಂದಲಕಾರಿ ಹೇಳಿಕೆ ನೀಡಿದರು. ಸಭಾಧ್ಯಕ್ಷರು ಮುಂದಿನ ಪ್ರಶ್ನೆ ಕೈಗೆತ್ತಿಕೊಂಡಿದ್ದರಿಂದ ನಾರಾಯಣಸ್ವಾಮಿಯವರಿಗೆ ಸ್ಪಷ್ಟ ಉತ್ತರ ಸಿಗಲಿಲ್ಲ.

SCROLL FOR NEXT