ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್
ವೇತನ, ಭತ್ಯೆ ಮತ್ತು ಪಿಂಚಣಿಯಲ್ಲಿ ಶೇ.23.55ರಷ್ಟು ಏರಿಕೆ, ಒಆರ್ಒಪಿ ಮಾದರಿಯಲ್ಲೇ ಸಮಾನ ಶ್ರೇಣಿಗೆ ಸಮಾನ ಪಿಂಚಣಿ...
ನವದೆಹಲಿ: ವೇತನ, ಭತ್ಯೆ ಮತ್ತು ಪಿಂಚಣಿಯಲ್ಲಿ ಶೇ.23.55ರಷ್ಟು ಏರಿಕೆ, ಒಆರ್ಒಪಿ ಮಾದರಿಯಲ್ಲೇ ಸಮಾನ ಶ್ರೇಣಿಗೆ ಸಮಾನ ಪಿಂಚಣಿ ಯೋಜನೆ ಜಾರಿ...! ಇವು 7ನೇ ವೇತನ ಆಯೋಗದ ವರದಿಯಲ್ಲಿನ ಪ್ರಮುಖ ಅಂಶಗಳು.
ಮುಖ್ಯಾಂಶಗಳು
- ವೇತನ, ಭತ್ಯೆ ಶೇ.23.55ರಷ್ಟು ಹೆಚ್ಚಳ
- ಜ.1, 2016ರಿಂದ ಶಿಫಾರಸುಗಳ ಅನುಷ್ಠಾನ
- ಕನಿಷ್ಠ ವೇತನ ರು.18 ಸಾವಿರ, ಗರಿಷ್ಠ ರು.2.25 ಲಕ್ಷ
- ವಾರ್ಷಿಕ ವೇತನ ಹೆಚ್ಚಳ ಶೇ.3ರಲ್ಲೇ ಮುಂದುವರಿಕೆ
- ಪಿಂಚಣಿಯಲ್ಲಿ ಶೇ.24ರಷ್ಟು ಹೆಚ್ಚಳ
- ಯೋಧರಂತೆ ಕೇಂದ್ರ ಅಧಿಕಾರಿಗಳಿಗೂ ಒಆರ್ಒಪಿ ಮಾದರಿ ನೀತಿ ಪ್ರಸ್ತಾಪ
- ಗ್ರ್ಯಾಚ್ಯುಟಿ ಮಿತಿ ರು.10 ಲಕ್ಷದಿಂದ ರು.20 ಲಕ್ಷಕ್ಕೆ ಏರಿಕೆ, ಡಿಎಯು ಶೇ.50ರಷ್ಟು ಹೆಚ್ಚಿದರೆ ಗ್ರಾಚ್ಯುಟಿ ಶೇ.25ರಷ್ಟು ಹೆಚ್ಚಿಸಲು ಪ್ರಸ್ತಾಪ
- ಸದ್ಯ ಸಚಿವ ಸಂಪುಟ ಕಾರ್ಯದರ್ಶಿ ವೇತನ ರು.90 ಸಾವಿರ, ಇನ್ನು ರು.2.5ಲಕ್ಷ
- ಎನ್ಪಿಎಸ್ ಕುಂದುಕೊರತೆಗಳ ಪರಿಹಾರಕ್ಕೆ ಒಂಬುಡ್ಸ್ಮನ್ ಸ್ಥಾಪನೆ
- ಶಾರ್ಟ್ ಸರ್ವಿಸ್ ಕಮಿಷನ್ಡ್ ಆಫೀಸರ್ ಗಳಿಗಾಗಿ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ವರ್ಷದ ಎಕ್ಸಿಕ್ಯುಟಿವ್ ಅಥವಾ ಎಂಟೆಕ್ ಕಾರ್ಯಕ್ರಮ