ಲಂಡನ್ ನ ಲ್ಯಾಂಬೆತ್ ನಗರದಲ್ಲಿ ಪ್ರತಿಷ್ಠಾಪಿಸಿರುವ ಬಸವ ಮೂರ್ತಿ(ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಬಸವಣ್ಣ ಲಿಂಗೈಕ್ಯರಾದ ದಿನ ಗೊತ್ತಿಲ್ಲ

ಬಸವಣ್ಣನವರು ಹುಟ್ಟಿದ ವರ್ಷ ಕುರಿತು ಎಲ್ಲಿಯೂ ಗೊಂದಲ ವಿಲ್ಲ. ಆದರೆ, ಅವರು ಲಿಂಗೈಕ್ಯರಾದ ವರ್ಷ ಕುರಿತು ಸಾಕಷ್ಟು ಗೊಂದಲ ಗಳಿವೆ ಎಂದು ನೀರಜ್ ಪಾಟೀಲ್ ಹೇಳಿದ್ದಾರೆ...

ಬೆಂಗಳೂರು: ಬಸವಣ್ಣನವರು ಹುಟ್ಟಿದ ವರ್ಷ ಕುರಿತು ಎಲ್ಲಿಯೂ ಗೊಂದಲ ವಿಲ್ಲ. ಆದರೆ, ಅವರು ಲಿಂಗೈಕ್ಯರಾದ ವರ್ಷ ಕುರಿತು ಸಾಕಷ್ಟು ಗೊಂದಲ ಗಳಿವೆ ಎಂದು ನೀರಜ್ ಪಾಟೀಲ್ ಹೇಳಿದ್ದಾರೆ.

ಇನ್ನು, ಬಸವಣ್ಣನವರು ಲಿಂಗೈಕ್ಯರಾದ ಕಾಲ ಕುರಿತ ವಿವಾದದ ಬಗ್ಗೆ ಡಾ. ನೀರಜ್ ಪಾಟೀಲ್ ನೀಡುವ ವಿವರಣೆ ಹೀಗಿದೆ: `ಬಸವಣ್ಣನವರು ಹುಟ್ಟಿದ ವರ್ಷ ಕುರಿತು ಎಲ್ಲಿಯೂ ಗೊಂದಲವಿಲ್ಲ. ಆದರೆ, ಅವರು ಲಿಂಗೈಕ್ಯರಾದ ವರ್ಷ ಕುರಿತು ಸಾಕಷ್ಟು ಗೊಂದಲಗಳಿವೆ. ಕ್ರಿಶ 1168ರ ನಂತರ ಬಸವಣ್ಣನವರ ಚಟುವಟಿಕೆ ಕುರಿತು ಯಾವುದೇ ಮಾಹಿತಿ ಎಲ್ಲಿಯೂ ದಾಖಲಾಗಿಲ್ಲ. ಹೀಗಾಗಿ, ಅವರು ಬಿಜ್ಜಳನ ದೇಹಾಂತ್ಯ ಸಮಯದಲ್ಲೇ ಲಿಂಗೈಕ್ಯರಾಗಿರುವ ಸಾಧ್ಯತೆಗಳಿವೆ ಎಂದು ಬಹಳಷ್ಟು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಈ ಕುರಿತು ಐತಿಹಾಸಿಕ ದಾಖಲೆಗಳಿಲ್ಲ. ಈ ಹಿನ್ನೆಲೆಯಲ್ಲಿ ನಾನು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಬಸವಣ್ಣನವರ ದೇಹಾಂತ್ಯ ಕಾಲ ನಿರ್ಣಯಿಸಲು ಸರ್ಕಾರ ತಜ್ಞರ ಸಮಿತಿ ರಚಿಸಲಿ. ಆ ಸಮಿತಿ ನೀಡುವ ವರದಿಯ ಆಧಾರದ ಮೇಲೆ ನಾನು ಪುತ್ಥಳಿಯ ಕೆಳಗೆ ನಮೂದಾಗಿರುವ ಲಿಂಗೈಕ್ಯ ವರ್ಷವನ್ನು ಬದಲಿಸಲು ಸಿದ್ಧನಿದ್ದೇನೆ'. ಬಸವಣ್ಣನವರು ಲಿಂಗೈಕ್ಯರಾದ ವರ್ಷದ ಕುರಿತು ಖುದ್ದು ನೀರಜ್ ಪಾಟೀಲ್ ಅವರಿಗೇ ಗೊಂದಲವಿರುವಾಗ, ಪುತ್ಥಳಿಯ ಕೆಳಗೆ ಮರಣ ವರ್ಷವನ್ನು ಹೇಗೆ ಕೆತ್ತಿಸಿದರು? ಯಾವ ಆಧಾರದ ಮೇಲೆ ಬಸವಣ್ಣನವರು ಲಿಂಗೈಕ್ಯರಾಗಿದ್ದು ಕ್ರಿಶ 1168ರಲ್ಲಿ ಎಂದು ನಿರ್ಣಯಿಸಿದರು ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ಕೇವಲ 12ನೇ ಶತಮಾನದ ದಾರ್ಶನಿಕ ಎಂದು ಹೇಳಬಹುದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT