ಮನೋಹರ್ ಪರ್ರಿಕರ್ 
ಪ್ರಧಾನ ಸುದ್ದಿ

ಭವಿಷ್ಯದಲ್ಲಿ ಸೈಬರ್ ಯುದ್ಧ ಸಾಧ್ಯತೆ

ಭವಿಷ್ಯದಲ್ಲಿ ನಾವು ಸೈಬರ್ ಯುದ್ಧಗಳನ್ನು ಎದುರಿಸಬೇಕಾಗಬಹುದು.'' ಇಂತಹುದೊಂದು ಆತಂಕ ವ್ಯಕ್ತಪಡಿಸಿದ್ದು ಬೇರಾರೂ ಅಲ್ಲ, ರಕ್ಷಣಾ ಸಚಿವ ಮನೋಹರ್ ...

ನವದೆಹಲಿ: ``ಭವಿಷ್ಯದಲ್ಲಿ ನಾವು ಸೈಬರ್ ಯುದ್ಧಗಳನ್ನು ಎದುರಿಸಬೇಕಾಗಬಹುದು.'' ಇಂತಹುದೊಂದು ಆತಂಕ ವ್ಯಕ್ತಪಡಿಸಿದ್ದು ಬೇರಾರೂ ಅಲ್ಲ, ರಕ್ಷಣಾ ಸಚಿವ ಮನೋಹರ್ ಪರ್ರಿಕರ್.``ಇಂದಿನ ಜಗತ್ತಿನಲ್ಲಿ ಮಾಹಿತಿ ತಂತ್ರಜ್ಞಾನವು ಮಹತ್ವದ ಪಾತ್ರ ವಹಿಸುತ್ತಿದೆ. ಹಾಗಂತ, ಸಾಂಪ್ರದಾಯಿಕ ಸೇನೆಯನ್ನು ಬದಲಿಸಬೇಕಿಲ್ಲ. ಸೇನಾ ಅರಿವಿಗೆ ಅಗತ್ಯವಾದ ತಂತ್ರಜ್ಞಾನ ಗಳು ಹಾಗೂ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕಿದೆ. ಈ ವಿಚಾರದಲ್ಲಿ ನಾವು ಐಎಎಸ್‍ನಂತಹ ಉಗ್ರ ಸಂಘಟನೆಯ ಉದಾಹರಣೆಯನ್ನೇ ತೆಗೆದುಕೊಳ್ಳಬಹುದು. ಈ ಸಂಘಟನೆ ಇಂಟರ್ನೆಟ್ ಅನ್ನು ಬಳಸಿಕೊಂಡೇ ಉಗ್ರರ ನೇಮಕ ಮಾಡಿಕೊಳ್ಳುತ್ತಿದೆ, ಬೆಂಬಲ ಪಡೆಯುತ್ತಿದೆ. ಇವರು ತಮ್ಮ ಉದ್ದೇಶ ಈಡೇರಿಕೆಗಾಗಿ ತಂತ್ರಜ್ಞಾನವನ್ನು ಪರಿಣಾಮಕಾರಿ ಯಾಗಿ ಬಳಸಿಕೊಳ್ಳುತ್ತಿದ್ದಾರೆ'' ಎಂದಿದ್ದಾರೆ ಪರ್ರಿಕರ್. 
ಉಲ್ಟಾ ಹೊಡೆದ ಐಎಸ್‍ಐಎಸ್: ಲಷ್ಕರ್ ಪಾಕಿಸ್ತಾನಸೇನೆಯ ಆದೇಶದಂತೆ ಕೆಲಸ ಮಾಡುತ್ತದೆ ಎಂದು ಇತ್ತೀಚೆಗಷ್ಟೇ ಲೇವಡಿ ಮಾಡಿದ್ದ ಐಎಸ್‍ಐಎಸ್ ಈಗ ಉಲ್ಟಾ ಹೊಡೆದಿದೆ. ``ಅಲ್‍ಖೈದಾವು ಪಾಕ್ ಸೇನೆಯ ಕೈಗೊಂಬೆಯಲ್ಲ. ಪಾಕ್ ಸೇನೆಯೇ ಧರ್ಮಭ್ರಷ್ಟ ಹಾಗೂ ಅನೈತಿಕ ಪಡೆಯಾಗಿದೆ'' ಎಂದು ಐಎಸ್ ಹೇಳಿದೆ. ಸಮರಕ್ಕೆ ಹಿಂದೆಸರಿದ ಪಾಕ್: ಐಎಸ್ ಉಗ್ರಗಾಮಿಗಳನ್ನು ಮಟ್ಟಹಾಕ ಲೆಂದು ಅಮೆರಿಕವು ಅತಿದೊಡ್ಡ ಸೇನಾ ಮೈತ್ರಿಗೆ  ಮುಂದಾಗಿದ್ದರೆ, ಪಾಕ್ ಈ ಪ್ರಸ್ತಾಪವನ್ನು ತಿರಸ್ಕರಿಸಿದೆ. ``ನಾವು ಆಫ್ಗಾನ್ ಗಡಿಯಲ್ಲಿ 1.82 ಲಕ್ಷ ಸೈನಿಕರನ್ನು ನಿಯೋಜಿಸಿದ್ದೇವೆ. ಈ ಪ್ರದೇಶದ ಹೊರತಾಗಿ ಬೇರೆಲ್ಲೂ ಸೇನಾ ನಿಯೋಜನೆಗೆ ಸಿದ್ಧರಿಲ್ಲ'' ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ