ನವದೆಹಲಿ: ಅಸಹಿಷ್ಣುತೆ ವಿವಾದದಲ್ಲಿ ಕೇಂದ್ರ ಸರ್ಕಾರ ಚರ್ಚೆಗೆ ತಯಾರಿದೆ ಎಂದು ಸಂಸದೀಯ ವ್ಯವಹಾರಖಾತೆ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂಬುದು ಬರೀ ಆರೋಪವಷ್ಟೇ. ಇದನ್ನು ನಾವು ಒಪ್ಪುವುದಿಲ್ಲ. ದಾದ್ರಿ ಸೇರಿದಂತೆ ಇನ್ನಿತರ ಘಟನೆಗಳಲ್ಲಿ ಕೇಂದ್ರ ಸರ್ಕಾರದ್ದಾಗಲೀ, ಬಿಜೆಪಿಯದ್ದಾಗಲೀ ಕೈವಾಡವಿಲ್ಲ. ಇಂಥಾ ಘಟನೆಗಳು ಎದುರಾದರೆ ಅದರ ವಿರುದ್ಧ ರಾಜ್ಯ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕು.
ಪ್ರತಿಯೊಬ್ಬರೂ ಸಹಿಷ್ಣುತೆಯಿಂದ ವ್ಯವಹರಿಸಬೇಕು. ಈ ವಿವಾದದಲ್ಲಿ ಯಾವ ರೀತಿಯ ಚರ್ಚೆಯನ್ನು ಮಾಡಬೇಕೆಂದು ವಿಪಕ್ಷಗಳು ಆಗ್ರಹಿಸುತ್ತವೆ ಎಂಬುದನ್ನು ಸರ್ವಪಕ್ಷ ಸಭೆಯಲ್ಲಿ ತಿಳಿಸಬೇಕು ಎಂದು ನಾಯ್ಡು ಹೇಳಿದ್ದಾರೆ.