ಇಸ್ಲಾಮಾಬಾದ್: ತೆಹರಿಕ್-ಇ-ತಾಲಿಬಾನ್ ಪಾಕಿಸ್ತಾನದ ಹಿರಿಯ ಕಮ್ಯಾಂಡರ್ ಅಫ್ಗಾನಿಸ್ಥಾನದಲ್ಲಿನ ಗಡಿಯಲ್ಲಿ ಅಮೇರಿಕಾದ ಡ್ರೋನ್ ದಾಳಿಗೆ ಹತ್ಯೆಯಾಗಿದ್ದಾನೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ತಾಲಿಬಾನಿನ ಒಂದು ತಂಡವನ್ನು ಖಾನ್ ಸಯ್ಯದ್ ಮುನ್ನಡೆಸುತ್ತಿದ್ದ.
ಈ ಡ್ರೋನ್ ದಾಳಿಯಲ್ಲಿ ಒಟ್ಟು ೧೨ ಉಗ್ರಗಾಮಿಗಳು ಮೃತಪಟ್ಟಿದ್ದು, ಮತ್ತಿತರ ೨೦ ಜನ ಗಾಯಗೊಂಡಿದ್ದಾರೆ.
ಆದರೂ ಸಯ್ಯದ್ ಸಾವು ಅಧಿಕೃತವಾಗಿ ಧೃಢೀಕರಿಸಿಲ್ಲ.
ಸಾಕ್ಷಿಗಳ ಪ್ರಕಾರ ಈ ಡ್ರೋನ್ ದಾಳಿ ನಡೆದಾಗ, ಈ ತಾಲಿಬಾನ್ ನಾಯಕರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಳ್ಳಲು ಭೇಟಿ ನಡೆಸಿದ್ದರು ಎಂದು ತಿಳಿದುಬಂದಿದೆ.