ಪ್ರಧಾನ ಸುದ್ದಿ

ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣ: ಚಿದಂಬರಂ ಪುತ್ರನ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

Guruprasad Narayana

ನವದೆಹಲಿ: ಕಾಂಗ್ರೆಸ್ ನಾಯಕ ಕಾರ್ತಿ ಪಿ ಚಿದಂಬರಂ ಅವರ ಕೆಲವು ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಮಂಗಳವಾರ ದಾಳಿ ನಡೆಸಿವೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರ ಪುತ್ರನ ವ್ಯವಹಾರ ಸಂಸ್ಥೆಗಳ ಮೇಲೆ ದಾಳಿ ಮಾಡಲಾಗಿದೆ.

ಕಾರ್ತಿ ಅವರಿಗೆ ಸಂಬಂಧಿಸಿದ ವಾಸನ್ ಐ ಕೇರ್ ಮತ್ತು ಅಡ್ವಾಂಟೇಜ್ ಸ್ಟ್ರ್ಯಾಟಜಿಕ್ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ. ೨ಜಿ ಹಗರಣದ ಒಂದು ಪ್ರಕರಣವಾಗಿರುವ ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣವನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.

ಈ ಪ್ರಕರಣದ ತನಿಖೆ ಸುಪ್ರೀಮ್ ಕೋರ್ಟ್ ಕಣ್ಗಾವಲಿನಲ್ಲಿ ನಡೆಯುತ್ತಿದ್ದು ತನಿಖೆ ಮುಗಿಯುವವರೆಗೆ ಜಾರಿ ನಿರ್ದೇಶನಾಲಯಕ್ಕೆ ರಾಜೇಶ್ವರ್ ಸಿಂಗ್ ಅವರನ್ನು ಸಹ ನಿರ್ದೇಶಕನಾಗಿ ನೇಮಕ ಮಾಡಿತ್ತು.

ಈ ತನಿಖೆಯ ಭಾಗವಾಗಿ ಸಿಬಿಐ ಈಗಾಗಲೇ ಕಾರ್ತಿ ಅವರ ಹೇಳಿಕೆಯನ್ನು ಪಡೆದುಕೊಂಡಿದೆ.

SCROLL FOR NEXT