ನವದೆಹಲಿ: ಇಂದು ಸಂಸತ್ತಿನಲ್ಲಿ ಬಿಜೆಪಿ ಸಂಸದೀಯ ಸಭೆ ಜರುಗಲಿದ್ದು ಪಕ್ಷದ ಹಿರಿಯ ನಾಯಕರು ಜಾರಿಯಲ್ಲಿರುವ ಚಳಿಗಾಲದ ಅಧಿವೇಶನದಲ್ಲಿ ತಂತ್ರಗಾರಿಕೆ ರೂಪಿಸುವ ಬಗ್ಗೆ ಚರ್ಚಿಸಲಿದ್ದಾರೆ.
ಪ್ಯಾರಿಸ್ ನಿಂದ ಹಿಂದಿರುಗಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಮಾತನಾಡುವ ನಿರೀಕ್ಷೆಯಿದೆ.
ಜಿ ಇಸ್ ಟಿ ಕಾಯ್ದೆಯನ್ನು ಜಾರಿ ಮಾಡಲು ಸರ್ಕಾರ ವಿರೋಧ ಪಕ್ಷಗಳ ಬೆಂಬಲ ಕೋರಿದೆ. ಮುಂಗಾರು ಅಧಿವೇಶನದಲ್ಲೂ ಇದನ್ನು ಜಾರಿ ಮಾಡಲು ಸಾಧ್ಯವಾಗದಿದ್ದರಿಂದ ಸಮಯ ಮೀರುತ್ತಿರುವುದು ಸರ್ಕಾರಕ್ಕೆ ಆತಂಕ ತಂದಿದೆ.
ಸೋಮವಾರ ಅಸಹಿಷ್ಣುತೆ ಮತ್ತು ಬೆಲೆ ಏರಿಕೆ ವಿಷಯವನ್ನು ವಿರೋಧಪಕ್ಷ ಎತ್ತಿದ್ದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ನವೆಂಬರ್ ೨೬ ರಂದು ಪ್ರಾರಂಭವಾದ ಅಧಿವೇಶನದಲ್ಲಿ ಮೊದಲಿಗೆ ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಸಂವಿಧಾನದ ಬಗ್ಗೆ ಚರ್ಚೆ ಇಟ್ಟುಕೊಡಿದ್ದರಿಂದ ವಿರೋಧ ಪಕ್ಷಗಳು ಕಲಾಪಗಳಿಗೆ ಅಡ್ಡಿಪಡಿಸದಿದ್ದರೂ ಅಸಹಿಷ್ಣುತೆ ಮತ್ತು ಕೋಮು ದ್ವೇಷದ ವಿಚಾರವಾಗಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು.