ನರೇಂದ್ರ ಮೋದಿ 
ಪ್ರಧಾನ ಸುದ್ದಿ

ನಾವು ಜಾತಿ ಮತ್ತು ಧರ್ಮಗಳನ್ನು ಮೀರಿ ಬೆಳೆಯಬೇಕು: ಮೋದಿ

ಸಂವಿಧಾನವೇ ನಮಗೆ ಸ್ಫೂರ್ತಿ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಜನಧರ್ಮ ಮತ್ತು ಪಂಗಡಗಳನ್ನು ಮೆಟ್ಟಿ ನಿಲ್ಲಬೇಕು ಎಂದು ಮಂಗಳವಾರ...

ನವದೆಹಲಿ: ಸಂವಿಧಾನವೇ ನಮಗೆ ಸ್ಫೂರ್ತಿ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಜನ ಜಾತಿ ಮತ್ತು ಧಾರ್ಮಿಕ ವಿಷಯಗಳನ್ನು ಮೀರಿ ಬೆಳೆಯಬೇಕು ಎಂದು ಮಂಗಳವಾರ ಹೇಳಿದ್ದಾರೆ.

ಇಂದು ರಾಜ್ಯಸಭೆಯಲ್ಲಿ ಸಂವಿಧಾನದ ಕುರಿತ ಚರ್ಚೆಯ ವೇಳೆ ಮಾತನಾಡಿದ ಮೋದಿ, ನಾವು ಒಗ್ಗಟ್ಟಾಗಿರದಿರಲು ಹಲವು ಕಾರಣಗಳಿವೆ. ಆದರೆ ನಾವು ಒಗ್ಗಟ್ಟಾಗಿರಲು ಕಾರಣಗಳನ್ನು ಹುಡುಕಬೇಕಿದೆ. ಸಮಾಜ ತಾನಾಗಿಯೇ ಸುಧಾರಣೆಗೊಳ್ಳಬೇಕು. ಕೆಲವು ಕೆಟ್ಟ ಆಚರಣೆಗಳಿಂದ ನಾವು ಹೊರಬರಬೇಕಿದೆ ಎಂದರು.

ಮಮತಾಭಾವ ಹಾಗೂ ಸಮತಾಭಾವ ಎರಡೂ ಇದ್ದರಷ್ಟೇ ದೇಶ ಮುನ್ನಡೆಯಲು ಸಾಧ್ಯ. ಸಂವಿಧಾನ ರಚನೆ ವೇಳೆ ಹಲವು ಒತ್ತಡಗಳು ಹಲವೆಡೆಯಿಂದ ಬಂದಿದ್ದವು. ಆದರೂ ಸಹ ನಮಗೆ ಸ್ಪಷ್ಟ ಸಂವಿಧಾನ ಸಿಕ್ಕಿದೆ. ನಮ್ಮ ಸಂವಿಧಾನ ನಮಗೆ ಸ್ಫೂರ್ತಿಯಾಗಬೇಕು. ಸಂವಿಧಾನದ ಸಂದೇಶ ಮುಂದಿನ ಪೀಳಿಗೆಗೆ ತಲುಪಬೇಕು ಎಂದರು.

ಪ್ರತಿಯೊಬ್ಬರು ದೇಶಕ್ಕಾಗಿ ಸಕಾರಾತ್ಮಕ ಸೇವೆ ಸಲ್ಲಿಸಿದ್ದಾರೆ. ನಮ್ಮ ಹಿರಿಯ ನಾಯಕರ ಬಗ್ಗೆ ಯುವ ಪೀಳಿಗೆಗೆ ತಿಳಿಯಲಿ ಅಂತ ಸಂವಿಧಾನ ದಿನಾಚರಣೆ ಮಾಡಲಾಗಿದೆ. ಸಂವಿಧಾನ ನಮಗೆ ದಾರಿದೀಪವಾಗಿದೆ ಎಂದರು.

ಈಗ ಜಗತ್ತು ನಮ್ಮತ್ತ ನೋಡುತ್ತಿದ್ದು, ನಾವು ನಿಭಾಯಿಸಬೇಕಾದ ಕೆಲವು ಜವಾಬ್ದಾರಿಗಳಿವೆ. ನಾವು ಈ ದೇಶದ ಜನರಿಗೆ ಉತ್ತರದಾಯಿಗಳಾಗಿದ್ದೇವೆ. ನೀನು, ನಾನು ಎಂಬುದರಿಂದ ದೇಶದ ಅಭಿವೃದ್ಧಿಯಾಗಲ್ಲ. ಪಕ್ಷ, ಪ್ರತಿಪಕ್ಷ ಹೊರತುಪಡಿಸಿ ದೇಶಕ್ಕಾಗಿ ಶ್ರಮಿಸಬೇಕು ಎಂದು ಪ್ರಧಾನಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!