ಫ್ಲಿಪ್ ಕಾರ್ಟ್ ಸಂಸ್ಥೆಯ ಲೋಗೋ 
ಪ್ರಧಾನ ಸುದ್ದಿ

ಫ್ಲಿಪ್ ಕಾರ್ಟ್ ಗೆ ೨೦ ಲಕ್ಷ ರೂ ಮೋಸ ಮಾಡಿದ ಹೈದರಾಬಾದ್ ಯುವಕ

ಇ ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ಸಂಸ್ಥೆಯಿಂದ ಉತ್ಪನ್ನಗಳನ್ನು ಕೊಂಡ ಹೈದರಾಬಾದಿನ ಯುವಕ ಸಂಸ್ಥೆಗೆ ೨೦ ಲಕ್ಷ ರೂ ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಇ ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ಸಂಸ್ಥೆಯಿಂದ ಉತ್ಪನ್ನಗಳನ್ನು ಕೊಂಡ ಹೈದರಾಬಾದಿನ ಯುವಕ ಸಂಸ್ಥೆಗೆ ೨೦ ಲಕ್ಷ ರೂ ಮೋಸ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಸಂಸ್ಥೆಯಿಂದ ಹಲವಾರು ವಿದ್ಯುನ್ಮಾನ ಉಪಕರಣಗಳನ್ನು ಕೊಳ್ಳುತ್ತಿದ್ದ ವೀರಸ್ವಾಮಿ, ನಂತರ ಅವುಗಳು ಕೆಟ್ಟಿವೆ ಎಂದು ಹಿಂದಿರುಗಿಸುತ್ತಿದ್ದನಂತೆ. ವರದಿಗಳ ಪ್ರಕಾರ, ಕೆಟ್ಟಿವೆ ಎಂದು ಹೇಳು ಹಿಂದಿರುಗಿಸುವಾಗ, ಪ್ಯಾಕಿನಲ್ಲಿ ನಕಲಿ ಉತ್ಪನ್ನಗಳನ್ನು ತುಂಬಿ ಕಳುಹಿಸುತ್ತಿದ್ದನಂತೆ.

ಈ ೩೨ ವರ್ಷದ ಯುವಕ ಉತ್ಪನ್ನಗಳನ್ನು ಕೊಳ್ಳಲು ಹಲವಾರು ನಕಲಿ ಈಮೇಲ್ ಐಡಿಗಳನ್ನು ಬಳಸಿರುವುದಲ್ಲದೆ, ಹಣವನ್ನು ಕೂಡ ಬೇರೆ ಬೇರೆ ಖಾತೆಗಳಿಂದ ತುಂಬಿದ್ದಾನೆ. ಸಂಸ್ಥೆಯ ಪಾಲಿಸಿಯ ಪ್ರಕಾರ ಉತ್ಪನ್ನವನ್ನು ಹಿಂತಿರುಗಿಸಿದ ನಂತರ ಹಣವನ್ನು ಖಾತೆಗೆ ಹಿಂದಿರುಗಿಸಲಾಗುತ್ತದೆ.

ಫ್ಲಿಪ್ ಕಾರ್ಟ್ ನಿಂದ ಸುಮಾರು ೨೦೦ ಉತ್ಪನ್ನಗಳನ್ನು ಕೊಂದು, ಈ ಮಾರ್ಗದಲ್ಲಿ ಸಂಸ್ಥೆಗೆ ಮೋಸ ಮಾಡಿ ಸುಮಾರು ೨೦ ಲಕ್ಷ ನಷ್ಟ ಉಂಟುಮಾಡಿದ್ದಾನೆ ಎಂದು ದೂರಲಾಗಿದೆ.

ಪೊಲೀಸರು ಈ ದೂರಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.




Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!