ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಪಿಒ ಉದ್ಯೋಗಿಯ ಮೇಲೆ ಚಲಿಸುವ ವಾಹನದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ತನಿಖೆ ಚುರುಗೊಳಿಸಿರುವ ಮಡಿವಾಳ ಠಾಣಾ ಪೊಲೀಸರು, ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಶಂಕಿತ ಟೆಂಪೊ ಟ್ರಾವೆಲರ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಟಿಟಿ ವಾಹನದ ನೋಂದಣಿ ಮೂಲವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಇಂದಿರಾ ನಗರ ಆರ್‌ಟಿಒನಲ್ಲಿ ನೋಂದಣಿಯಾಗಿದೆ. ಕೆಎಂ 03, ಬಿ 1863 ನಂಬರಿನ ಈ ಟಿಟಿ ಶಂಕರ್ ಎಲ್ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ.
ಟಿಟಿ ವಾಹನದಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯ ಪರಿಚಯಸ್ಥನೂ ಒಬ್ಬ ಇದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಮಾದ್ಯಮಗಳ ವರದಿ ಮಾಡಿವೆ.