ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

'ಮರ್ಯಾದೆಗೆ ಅಂಜಿ ದೂರುಕೊಡಲ್ಲ ಎಂದು ರೇಪ್ ಮಾಡಿದ ಕಾಮುಕರು'

22 ವರ್ಷದ ಬಿಪಿಒ ಉದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಸಂಬಂಧ ಇಬ್ಬರು ಟಿಟಿ ಚಾಲಕರನ್ನು ಬಂಧಿಸಿ ವಿಚಾರಣೆಗೆ...

ಸಾಂದರ್ಭಿಕ ಚಿತ್ರ
Lingaraj Badiger
Updated On : 8 Oct 2015, 4:26 am

ಬೆಂಗಳೂರು: 22 ವರ್ಷದ ಬಿಪಿಒ ಉದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಸಂಬಂಧ ಇಬ್ಬರು ಟಿಟಿ ಚಾಲಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ವಿಚಾರಣೆ ವೇಳೆ ಕಾಮುಕರು, ಯುವತಿ ಮರ್ಯಾದೆ ಹೆದರಿಕೊಂಡು ದೂರು ನೀಡುವುದಿಲ್ಲ ಎಂದು ಭಾವಿಸಿ ಅತ್ಯಾಚಾರ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿಗಳನ್ನು ಕೃತ್ಯ ಎಸಗಿದ ಸ್ಥಳಕ್ಕೆ ಕರೆದೊಯ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಒಬ್ಬ ಯುವತಿ ಮೇಲೆ ಅತ್ಯಾಚಾರ ಎಸಗುತ್ತಿದ್ದರೆ, ಮತ್ತೊಬ್ಬ ಕಾವಲು ಕಾಯುತ್ತಿದ್ದ. ಅಲ್ಲದೆ ಯುವತಿಗೆ ಕಿರುಚದಂತೆ ರಾಡ್ ಹಾಗೂ ಇತರೆ ವಸ್ತುಗಳಿಂದ ಸಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಯುವತಿ ಜೀವಭಯದಿಂದ ಸುಮ್ಮನಿದ್ದಳು ಎಂದು ಆರೋಪಿ ಯೋಗೇಶ್ ಹಾಗೂ ಸುನೀಲ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

'ಮೊದಲು ಯುವತಿಯ ಬಳಿ ಇದ್ದ ವಸ್ತುಗಳನ್ನು ದರೋಡೆ ಮಾಡುವ ಯೋಚನೆ ಮಾಡಿದ್ದರು. ಆದರೆ ನಂತರ ಯುವತಿ ಮರ್ಯಾದೆಗೆ ಹೆದರಿ ಯಾರಿಗೂ ಹೇಳಲಿಕ್ಕಿಲ್ಲ ಎಂದುಕೊಂಡು ಅತ್ಯಾಚಾರ ಮಾಡಲು ನಿರ್ಧರಿಸಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.

'ಘಟನೆಯ ನಂತರ ಯುವತಿ ಸಹ ದೂರು ನೀಡಲು ಮುಂದಾಗಿರಲಿಲ್ಲ. ಆದರೆ ಇದು ಅಪರಾಧ ಪ್ರಕರಣವಾಗಿರುವುದರಿಂದ ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ನೀಡಿದ ನಂತರ ನಮಗೆ ಮಾಹಿತಿ ನೀಡಿದರು' ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಮಧ್ಯಪ್ರದೇಶ ಮೂಲದ ಬಿಪಿಒ ಉದ್ಯೋಗಿಯನ್ನು ಡ್ರಾಪ್ ಕೊಡುವ ನೆಪದಲ್ಲಿ ಟೆಂಪೋ ಟ್ರಾವೆಲರ್ ಗೆ ಹತ್ತಿಸಿಕೊಂಡು ಈ ಇಬ್ಬರು ಕಾಮುಕರು ಸತತ ನಾಲ್ಕು ಗಂಟೆಗಳ ಕಾಲ ಚಲಿಸುವ ವಾಹನದಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement