ಬಾಲಕಿ ಮೇಲೆ ಅತ್ಯಾಚಾರ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ದೆಹಲಿಯಲ್ಲಿ 4 ವರ್ಷದ ಪುಟ್ಟ ಕಂದಮ್ಮನ ಮೇಲೆ ಸಾಮೂಹಿಕ ಅತ್ಯಾಚಾರ..!

ನಿರ್ಭಯಾ ಪ್ರಕರಣ ಬಳಿಕದ ರಾಜಧಾನಿ ದೆಹಲಿಯಲ್ಲಿ ಮತ್ತೆ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, 4 ವರ್ಷದ ಪುಟ್ಟ ಬಾಲಕಿ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ...

ನವದೆಹಲಿ: ನಿರ್ಭಯಾ ಪ್ರಕರಣ ಬಳಿಕದ ರಾಜಧಾನಿ ದೆಹಲಿಯಲ್ಲಿ ಮತ್ತೆ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, 4 ವರ್ಷದ ಪುಟ್ಟ ಬಾಲಕಿ ಮೇಲೆ ಕಾಮುಕರು ಸಾಮೂಹಿಕ  ಅತ್ಯಾಚಾರ ನಡೆಸಿದ್ದಾರೆ.

ವಾಯುವ್ಯ ದೆಹಲಿ ಭಾಗದಲ್ಲಿರುವ ಕೇಶವ್ ಪುರಂ ಸ್ಲಮ್ ನಲ್ಲಿ ಈ ಘಟನೆ ಸಂಭವಿಸಿದ್ದು, ಪ್ರಸ್ತುತ ಬಾಲಕಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಕೇಶವಪುರನಲ್ಲಿ ತೀವ್ರ ರಕ್ತ  ಸ್ರಾವದಿಂದ ಬಿದ್ದಿದ್ದ ಮಗುವನ್ನು ಕಂಡ ದಾರಿಹೋಕರು ಕೂಡಲೇ ಆಕೆಯನ್ನು ದೆಹಲಿಯ ಮಹಾವೀರ್ ಆಸ್ಪತ್ರೆ ದಾಖಲು ಮಾಡಿದ್ದಾರೆ. ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಆಕೆಯ ಮೇಲೆ  ಅತ್ಯಾಚಾರವಾಗಿರುವುದನ್ನು ದಢಪಡಿಸಿದ್ದಾರೆ. ಅಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ಸಫ್ದರ್ ಜಂಗ್ ಆಸ್ಪತ್ರೆಗೆ ರವಾನಿಸುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಬಾಲಕಿಯನ್ನು ನಿರ್ಭಯಾ ಪ್ರಕರಣ ಸಂತ್ರಸ್ಥೆ ದಾಖಲಾಗಿದ್ದ ಅದೇ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನುರಿತ ತಜ್ಞರು ಬಾಲಕಿಯನ್ನು ಪರೀಕ್ಷೆಗೊಳಪಡಿಸಿದ್ದಾರೆ.  ಬಾಲಕಿಯನ್ನು ಪೈಶಾಚಿಕವಾಗಿ ಅತ್ಯಾಚಾರ ಮಾಡಲಾಗಿದ್ದು, ಬಾಲಕಿಯ ಖಾಸಗಿ ಅಂಗ, ಹೊಟ್ಟೆ ಮತ್ತು ದೇಹದ ಇತರೆ ಭಾಗಗಳಲ್ಲಿ ಚಾಕುವಿನಿಂದ ಕೊಯ್ದ ಗುರುತುಗಳು ಪತ್ತೆಯಾಗಿದೆ. ಅಲ್ಲದೆ  ಬಾಲಕಿಯ ಸೂಕ್ಷ್ಮ ಅಂಗಾಂಗಗಳು ತೀವ್ರವಾಗಿ ಗಾಯಗೊಂಡಿದ್ದು, ಬಹುವಿಧದ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಕೇಶವಪುರ ಸ್ಲಂ ಬಳಿ ಇರುವ ರೈಲ್ವೇ ಕ್ರಾಸಿಂಗ್ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಚಾಕಲೇಟ್ ಕೊಡಿಸುವುದಾಗಿ ಹೇಳಿ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ.  ಬಳಿಕ ಆಕೆಯನ್ನು ಮರದ ಮರೆಗೆ ಕರೆದೊಯ್ದು ಭೀಕರವಾಗಿ ಅತ್ಯಾಚಾರ ಮಾಡಿದ್ದಾರೆ. ಮಹಿಳೆಯೊಬ್ಬಳು ಬಹಿರ್ದೆಸೆಗಾಗಿ ಅದೇ ಮರದ ಹಿಂದಕ್ಕೆ ಹೋದಾಗ ಬಾಲಕಿ ರಕ್ತದ ಮಡುವಿನಲ್ಲಿ  ಬಿದ್ದಿರುವುದನ್ನು ಕಂಡು ಎಲ್ಲರಿಗೂ ವಿಚಾರ ತಿಳಿಸಿದ್ದಾಳೆ. ಬಾಲಕಿ ಬಿದ್ದಿದ್ದ ಸ್ಥಳದ ಪಕ್ಕದಲ್ಲಿಯೇ ವೈನ್ ಶಾಪ್ ಇದ್ದು, ಅಲ್ಲಿಗೆ ಬಂದಿದ್ದ ಮದ್ಯಪಾನಿಗಳೇನಾದರೂ ಈ ಕೃತ್ಯವೆಸಗಿರಬಹುದೇ  ಎಂದು ಪೊಲೀಸರು ಶಂಕಿಸುತ್ತಿದ್ದಾರೆ.

ಪ್ರಸ್ತುತ ಬಾಲಕಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಾಲಕಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ. ಬಿಪಿಒ ಉದ್ಯೋಗಿ ಮೇಲೆ  ಬೆಂಗಳೂರಿನಲ್ಲಿ ನಡೆದ ಸಾಮೂಹಿಕ  ಅತ್ಯಾಚಾರ ಪ್ರಕರಣ ಹಸಿರಾಗಿರುವಾಗಲೇ ನಿರ್ಭಯಾ ಪ್ರಕರಣವನ್ನು ನೆನಪಿಸುವ ಘೋರ ದುರಂತ ಸಂಭವಿಸಿರುವುದು ದೇಶದ ಪೊಲೀಸ್ ವ್ಯವಸ್ಥೆಯನ್ನು ಪ್ರಶ್ನಿಸುವಂತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಕೊನೆಯ ಓವರ್ ನಲ್ಲಿ ಭರ್ಜರಿ ಜಯ, ಪ್ಲೇಆಫ್ ಗೆ RCB ಲಗ್ಗೆ, ರೇಸ್ ನಿಂದ PBKS ಔಟ್, CSK ಆಸೆ ಜೀವಂತ!

IPL 2026: RCB vs PBKS ಪಂದ್ಯದಲ್ಲಿ ಎರಡು ಭಾರೀ ದಾಖಲೆ ನಿರ್ಮಿಸಿದ Virat Kohli

ಸ್ವಾತಂತ್ರ್ಯ ಹೋರಾಟಗಾರ ಗಣೇಶ್ ಶಂಕರ್ ವಿದ್ಯಾರ್ಥಿ ಪ್ರತಿಮೆ ಸ್ಥಾಪನೆಗೆ ವಿಳಂಬ: ಯೋಗಿಗೆ ರಕ್ತದಲ್ಲಿ ಪತ್ರ ಬರೆದ SP ಶಾಸಕ!

ಬೌಂಡರಿ ತಡೆದ್ರೆ ಬಿಡ್ತೀವಾ.. 42 ಡಿಗ್ರಿ ತಾಪಮಾನದಲ್ಲೂ 4 ರನ್ ಓಡಿಸಿದ Virat Kohli, ಹೈರಾಣಾದ DDP, ವೈರಲ್ ವಿಡಿಯೋ ಅಸಲೀಯತ್ತು ಬಯಲು

ಕೇರಳ: ವಿ.ಡಿ. ಸತೀಶನ್ ಸಂಪುಟದಲ್ಲಿ 20 ಸಚಿವರು,14 ಮಂದಿ ಹೊಸಬರು!

SCROLL FOR NEXT