ಅಸ್ಸಾಮಿನ ಲೇಖಕ ಮತ್ತು ಪತ್ರಕರ್ತ ಹಾಮೆನ್ ಬಾರ್ಗೋಹೇನ್ 
ಪ್ರಧಾನ ಸುದ್ದಿ

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ ಅಸ್ಸಾಮಿನ ಹಾಮೆನ್ ಬಾರ್ಗೋಹೇನ್

ದೇಶದಲ್ಲಿ ಹೆಚ್ಚಿತ್ತಿರುವ ಕೋಮು ಘರ್ಷಣೆ, ಅಸಹನೆ ಮತ್ತು ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದೆ ಇರುವುದನ್ನು ವಿರೋಧಿಸಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ

ಗೌಹಾಟಿ: ದೇಶದಲ್ಲಿ ಹೆಚ್ಚಿತ್ತಿರುವ ಕೋಮು ಘರ್ಷಣೆ, ಅಸಹನೆ ಮತ್ತು ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದೆ ಇರುವುದನ್ನು ವಿರೋಧಿಸಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವ ಲೇಖಕರ ಪಟ್ಟಿಗೆ ಅಸ್ಸಾಮಿನ ಲೇಖಕ ಮತ್ತು ಪತ್ರಕರ್ತ ಹಾಮೆನ್ ಬಾರ್ಗೋಹೇನ್ ಸೇರ್ಪಡೆಯಾಗಿದ್ದು ಅವರು ಕೂಡ ಪ್ರಶಸ್ತಿಯನ್ನು ಹಿಂದಿರುಗಿಸಲು ಮುಂದಾಗಿದ್ದಾರೆ.

ಅಸ್ಸಾಮಿನ ಪ್ರಾದೇಶಿಕ ಪತ್ರಿಕೆಯಲ್ಲಿ ಬರೆದು ಈ ವಿಷಯ ತಿಳಿಸಿರುವ ಬಾರ್ಗೋಹೇನ್ "ದಾಧ್ರಿ ಘಟನೆ ನಡೆದಾಗಿಲಿಂದಲೂ ನನ್ನೊಳಗೆ ಮೌನ ಪ್ರತಿಭಟನೆ ನಡೆಯುತ್ತಲೇ ಇತ್ತು. ಆದರೆ ಅದನ್ನು ವ್ಯಕ್ತಪಡಿಸುವ ವಿಧಾನ ತಿಳಿಯಲಿಲ್ಲ.

"ಈಗ ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣುತೆ ವಿರುದ್ಧ ಒಬ್ಬರ ನಂತರ ಒಬ್ಬರು ಕನಿಷ್ಠ ೧೦ ಜನ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂತಿರುಗಿಸಿರುವಾಗ ನಾನು ನನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸುವ ವಿಧಾನ ತಿಳಿಯಿತು" ಎಂದಿದ್ದಾರೆ.

ಇಂತಹ ನಡೆ ಇಡಲು ಕಾರಣಗಳನ್ನು ವಿವರಿಸಿರುವ ಅವರು "ನಾನು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಲು ದಾಧ್ರಿ ಘಟನೆ ಒಂದೆ ಕಾರಣವಲ್ಲ ಬದಲಾಗಿ ದೇಶದಲ್ಲಿ ದಬ್ಬಾಳಿಕೆಯ ಆಡಳಿತ ಹೆಚ್ಚುತ್ತಿದ್ದು ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯನ್ನು ವಿನಾಶದತ್ತ ಕೊಂಡೊಯ್ಯುತ್ತಿರುವುದನ್ನು ಪ್ರತಿಭಟಿಸಿದ್ದೇನೆ" ಎಂದು ಅವರು ತಿಳಿಸಿದ್ದಾರೆ.

ಬಾರ್ಗೋಹೇನ್ ಅವರ 'ಪಿತಾ ಪುತ್ರ' (ತಂದೆ ಮಗ) ಕಾದಂಬರಿಗೆ ೧೯೭೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ