ಸಬ್‌ಇನ್ಸ್‌ಪೆಕ್ಟರ್ ಜಗದೀಶ್ ಮೃತದೇಹ 
ಪ್ರಧಾನ ಸುದ್ದಿ

ಬೈಕ್ ಕಳ್ಳರನ್ನು ಹಿಡಿಯಲು ಹೋದ ಎಸ್ಐ ಎದೆಗೆ ಡ್ರ್ಯಾಗರ್‌ನಿಂದ ಇರಿದು ಹತ್ಯೆ

ದ್ವಿಚಕ್ರ ವಾಹನ ಕಳ್ಳರನ್ನು ಹಿಡಿಯಲು ಸಿಬ್ಬಂದಿಯೊಂದಿಗೆ ತೆರಳಿದ್ದ ದೊಡ್ಡಬಳ್ಳಾಪುರ ನಗರ ಠಾಣಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಜಗದೀಶ್ ರಿಗೆ ಆರೋಪಿಗಳು...

ನೆಲಮಂಗಲ: ದ್ವಿಚಕ್ರ ವಾಹನ ಕಳ್ಳರನ್ನು ಹಿಡಿಯಲು ಸಿಬ್ಬಂದಿಯೊಂದಿಗೆ ತೆರಳಿದ್ದ ದೊಡ್ಡಬಳ್ಳಾಪುರ ನಗರ ಠಾಣಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಜಗದೀಶ್ ರಿಗೆ ಆರೋಪಿಗಳು ಚೂರಿಯಿಂದ ಇರಿದು ಹತ್ಯೆ ಮಾಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. 
ನೆಲಮಂಗಲ ಸಿಎನ್ಎರ್ ಗ್ರಾನೈಟ್ಸ್ ಫ್ಯಾಕ್ಟರಿ ಬಳಿ ಚೇಸಿಂಗ್ ಮಾಡುವ ವೇಳೆ ಕಳ್ಳನೊಬ್ಬ ಎಸ್ಐ ಜಗದೀಶ್ ಅವರ ಎದೆಗೆ ಡ್ರ್ಯಾಗರ್ ನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ತೀವ್ರ ಇರಿತಕ್ಕೆ ಒಳಗಾದ ಜಗದೀಶ್ ಅವರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
ನೆಲಮಂಗಲದ ಸಿಎನ್ಎರ್ ಗ್ರಾನೈಟ್ಸ್ ಫ್ಯಾಕ್ಟರಿ ಬಳಿ ಬೈಕ್ ಕಳ್ಳರು ಅಡಗಿರುವ ಮಾಹಿತಿ ಪಡೆದ ಜಗದೀಶ್ ಅವರು ಪೇದೆಗಳಾದ ವೆಂಕಟೇಶ್, ಚಂದ್ರ, ಶ್ರೀಧರ್, ಗಂಗಾಧರ್ ಎಂಬುವರ ಜತೆಗೆ ಸಿವಿಲ್ ಡ್ರಸ್ ನಲ್ಲಿ ತೆರಳಿದ್ದು ಇಬ್ಬರು ಆರೋಪಿಗಳನ್ನು ಜಗದೀಶ್ ತಂಡ ಹಿಡಿದಿದೆ. ಈ ವೇಳೆ ತಪ್ಪಿಸಿಕೊಳ್ಳುವ ಸಲುವಾಗಿ ಕಳ್ಳನೊಬ್ಬ ಜಗದೀಶ್ ಅವರ ಎದೆಗೆ ಡ್ರ್ಯಾಗರ್ ನಿಂದ ಇರಿದು ಪರಾರಿಯಾಗಿದ್ದಾರೆ.
34 ವರ್ಷದ ಜಗದೀಶ್ ಅವರು ನೆಲಮಂಗಲ ತಾಲೂಕಿನ ಮಲ್ಲಾಪುರದ ನಿವಾಸಿಯಾಗಿದ್ದು, 2009ರ ಬ್ಯಾಚ್ ನ ಪೊಲೀಸ್ ಅಧಿಕಾರಿಯಾಗಿದ್ದರು.
ಜಗದೀಶ್ ಅವರನ್ನು ಹತ್ಯೆಗೈದ ಕಳ್ಳರು ಅವರ ಬಳಿಯಿದ್ದ ಸರ್ವಿಸ್ ರಿವಾಲ್ವರ್ ಕಸಿದು ಪರಾರಿಯಾಗಿದ್ದಾರೆ. ಕಳ್ಳರಾದ ತಂದೆ ಕೃಷ್ಣ ಹಾಗೂ ಮಗ ಮಧುವಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮ ಕಡೆಯಿಂದ ವೈಮಾನಿಕ ದಾಳಿ ಇರುವುದಿಲ್ಲ: 5 ವರ್ಷಗಳಲ್ಲಿ ಮೊದಲ ಬಾರಿಗೆ ಕದನ ವಿರಾಮ ಪ್ರಸ್ತಾಪಿಸಿದ ಯುಕ್ರೇನ್ ಅಧ್ಯಕ್ಷ Zelensky

ಡ್ರಗ್ಸ್ ಸೇವನೆ ದೃಢ: ಫುಕೆಟ್- ದೆಹಲಿ ಏರ್ ಇಂಡಿಯಾ ವಿಮಾನದ ಮುಖ್ಯ ಪೈಲಟ್ ವಜಾ!

Video: 'ಪೊಲೀಸರು ಬುದ್ದಿ ಕಲಿಸಿದ್ದಾರೆ, ತಪ್ಪನ್ನ ಕ್ಷಮಿಸಲ್ಲ'; ಮಗ ಸಾಮ್ರಾಟ್‌ ಬಗ್ಗೆ ಕೊನೆಗೂ ಮೌನ ಮುರಿದ ನಟ Duniya Vijay

‘ಹೂತುಹಾಕಬೇಕು ಎನ್ನುವವರಲ್ಲ ನಾವು’.. ‘ಮಹಿಳೆಯರಿಗೆ ಶಿಕ್ಷಣ, ಅವಕಾಶ ನೀಡುತ್ತಿದ್ದೇವೆ’: ‘ಮನೆಯಲ್ಲೇ ಇರಬೇಕು’ ಹೇಳಿಕೆಗೆ ಮುಸ್ಲಿಂ ಧರ್ಮಗುರು ಸ್ಪಷ್ಟನೆ, Video

ಜಮ್ಮು-ಕಾಶ್ಮೀರ: ಬುಡ್ಗಾಮ್‌ ಎನ್ ಕೌಂಟರ್ ನಲ್ಲಿ ಉಗ್ರನ ಹತ್ಯೆ; AK ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳು ವಶ!