ಪ್ರಧಾನ ಸುದ್ದಿ

ಜಗದೀಶ್ ಕುಟುಂಬಕ್ಕೆ ರು.೫೦ ಲಕ್ಷ ಪರಿಹಾರ

Srinivasamurthy VN

ಬೆಂಗಳೂರು: ಕಳ್ಳರ ಹಿಡಿಯುವ ವೇಳೆ ಇರಿತಕ್ಕೊಳಗಾಗಿ ಮೃತಪಟ್ಟಿರುವ ಎಸ್ಸೈ ಜಗದೀಶ್ ಅವರಿಗೆ ಇಲಾಖೆಯ ನಿಯಮದಂತೆ ರು.೩೦ ಲಕ್ಷ ಪರಿಹಾರ, ಸ್ಪೆಷನ್ ಗ್ರೂಪ್ ಇನ್ಷೂರೆನ್ಸ್ ರು.೨೦  ಲಕ್ಷ, ಹೊಸ ವಿಮಾ ಸ್ಕೀಂನ ರು.೫.೫ ಲಕ್ಷ, ಇಜಿಐಎಸ್ ರು.೧.೨೦ ಲಕ್ಷ, ಅವರ ಪತ್ನಿಗೆ ಇಲಾಖೆಯಿಂದ ಕೆಲಸವು ಲಭ್ಯವಾಗಲಿದೆ.

ಇದೇ ವೇಳೆ ಜಗದೀಶ್ ಅವರ ಸೇವಾ ಅವಧಿ  ಪೂರ್ಣಗೊಳ್ಳುವವರೆಗೂ ಅವರಿಗೆ ಪ್ರತಿ ತಿಂಗಳು ಬರಬೇಕಿರುವ ಪೂರ್ಣ ಸಂಬಳ ಕುಟುಂಬಕ್ಕೆ ಪಾವತಿಯಾಗುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. ೨೦೧೦ರಲ್ಲಿ ಜಗದೀಶ್ ರಮ್ಯಾ ಎಂಬುವರನ್ನು ವಿವಾಹವಾಗಿದ್ದು ಇಬ್ಬರು ಪುಟ್ಟ ಹೆಣ್ಣುಮಕ್ಕಳಿದ್ದಾರೆ. ಮಕ್ಕಳ ಸಂಪೂರ್ಣ ಶಿಕ್ಷಣ ವೆಚ್ಚವನ್ನು ನಿಯಮದಂತೆ ಇಲಾಖೆ ಹಾಗೂ ಸರ್ಕಾರ ವಹಿಸಿಕೊಳ್ಳಲಿದೆ ಎಂದು ಡಿಜಿ ಓಂಪ್ರಕಾಶ್ ಹೇಳಿದರು.

ಇಂದು ಅಂತ್ಯಕ್ರಿಯೆ

ಜಗದೀಶ್ ಪಾರ್ಥಿವ ಶರೀರ ಮರಣೋತ್ತರ ಪರೀಕ್ಷೆ ಬಳಿಕ ಸ್ವಗ್ರಾಮ ಮಲ್ಲಾಪುರ ತಲುಪಿದ್ದು ಶನಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ನೇತ್ರದಾನ
ಚಾಕುವಿನಿಂದ ಇರಿತಕ್ಕೆ ಒಳಗಾಗಿ ಪ್ರಾಣ ತೆತ್ತಿರುವ ಎಸ್ಸೈ ಜಗದೀಶ್ ಅವರ ನೇತ್ರಗಳನ್ನು ಡಾ.ರಾಜ್ ಕುಮಾರ್ ಐ ಬ್ಯಾಂಕ್‌ಗೆ ತಂದೆ ಶ್ರೀನಿವಾಸಯ್ಯ ಅವರು ದಾನ ಮಾಡಿದರು. ಈ ಮೂಲಕ  ಸಾವಿನಲ್ಲಿ ಜಗದೀಶ್ ಅವರು ಸಾರ್ಥಕತೆ ಮರೆದಿದ್ದಾರೆ.

ಮಲ್ಲಿಕಾರ್ಜುನ ಬಂಡೆ ನೆನಪು
೨೦೧೪ ಜನವರಿ ೮ರಂದು ಕುಖ್ಯಾತ ರೌಡಿ ಮುನ್ನಾ ದರ್ಬಾರ್ ಬಂಧನಕ್ಕೆ ತೆರಳಿದ್ದ ವೇಳೆ ಗುಂಡೇಟಿನಿಂದ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಎಸ್ಸೈ ಮಲ್ಲಿಕಾರ್ಜುನ ಬಂಡೆ  ಮೃತಪಟ್ಟಿದ್ದರು. ಜನವರಿ ೮ರಂದು ತಲೆಗೆ ಗುಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಬಂಡೆ ಅವರು ಹೈದ್ರಾಬಾದ್‌ನ ಆಸ್ಪತ್ರೆಯಲ್ಲಿ ಜ.೧೫ರಂದು ಕೊನೆಯುಸಿರೆಳೆದಿದ್ದರು.

ಸರ್ವಿಸ್ ರೆಕಾರ್ಡ್
ಎಸ್. ಜಗದೀಶ್
ಹುಟ್ಟಿದ ವರ್ಷ ೭-೨-೧೯೮೨
ವ್ಯಾಸಂಗ ಬಿಎ,ಎಲ್‌ಎಲ್‌ಬಿ
ಸೇವೆಗೆ ಸೇರಿದ್ದು ೮-೧೧-೨೦೧೦ ( ಪಿಎಸ್ಸೈ ನೇರ ನೇಮಕ)
ಊರು-ನೆಲಮಂಗಲ ಸಮೀಪದ ಮಲ್ಲಾಪುರ ಗ್ರಾಮ
ಹಾಲಿ ಕರ್ತವ್ಯ ದೊಡ್ಡಬಳ್ಳಾಪುರ ಠಾಣೆ
೨೦೧೪, ಜುಲೈ ೩ರಿಂದ ೨೦೦೫ರಿಂದ ೨೦೧೦ರ ವರೆಗೆ ಕಾನ್ಸ್‌ಟೇಬಲ್ ಆಗಿ ಕೆಲಸ
ಜಗದೀಶ್ ತಂದೆ ಶ್ರೀನಿವಾಸಯ್ಯ ಸಹಾಯಕ ಸಬ್ ಇನ್ಸ್ ಪೆಕ್ಟರ್ (ಎಸೈ)  ಆಗಿ ಕರ್ತವ್ಯ ನಿರ್ಹಹಿಸುತ್ತಿದ್ದ ಮಗ ಎಸ್ಸೈ ಆಗಿ ಕೆಲಸಕ್ಕೆ  ಸೇರಿದ ಬಳಿಕ ಸ್ವಯಂ ನಿವೃತ್ತಿ ಹೊಂದಿದರು. ಇವರ  ಸಂಬಂಧಿ ಕೂಡಾ ಪೊಲೀಸ್ ಅಧಿಕಾರಿಯಾಗಿ ನಿವೃತ್ತರಾಗಿದ್ದರು . ಎಸೈ ಆಗಿ  ಸೇವೆ ಆರಂಭಿಸುವುದಕ್ಕೂ ಮುನ್ನ ೨೦೦೫ರಲ್ಲಿ ಕಾನ್ಸ್ ಟೇಬಲ್ ಆಗಿ ಕೆಲಸಕ್ಕೆ ಸೇರಿದ್ದ ಜಗದೀಶ್,   ಸೂಲಿಬೆಲೆಯಲ್ಲಿ ಕೆಲಸ ಮಾಡಿದ್ದರು. ಎಸ್ಸೈ ಬಳಿಕ ಕೋಲಾರ, ಹಾಸನ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಇನ್ಸ್ ಪೆಕ್ಟರ್ ಜಗದೀಶ್.

SCROLL FOR NEXT