ಬೆಂಗಳೂರು: ಬೆಂಗಳೂರಿನ ಹಲವೆಡೆ ವಾರಾಂತ್ಯದ ಶನಿವಾರ, ಭಾನುವಾರ ಕತ್ತಲು ಆವರಿಸಲಿದೆ. ಈ ವ್ಯಾಪ್ತಿಗಳಲ್ಲಿ 9 ಗಂಟೆ ಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳಲಿದೆ. ಹೀಗಾಗಿ ನಾಗರಿಕರು ಮುಂಚಿತವಾಗಿಯೇ ಪ್ಲಾನ್ ಮಾಡಿಕೊಳ್ಳುವುದು ಒಳಿತು.
ಬಾಣಸವಾಡಿ ಘಟಕದ ನಿರ್ವಹಣಾ ಕಾರ್ಯಾಚರಣೆ ನಿಮಿತ್ತ ಅ.17 ರಂದು ಬೆಳಗ್ಗೆ 10 ರಿಂದ ಸಂಜೆ 7 ಗಂಟೆ ವರೆಗೆ ಈ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಕೆ.ಜಿ. ಹಳ್ಳಿ, ನಾಗವಾರ ಮುಖ್ಯ ರಸ್ತೆ, ಲಿಂಗರಾಜಪುರ ಮತ್ತು ಎಚ್‍ಬಿಆರ್ ಲೇಔಟ್, ಹೊರಮಾವು, ಗೋವಿಂದಪುರ, ಎಚ್‍ಆರ್‍ಬಿಆರ್ 3ನೇ ಬ್ಲಾಕ್, ರಾಮಯ್ಯ ಲೇಔಟ್, ನಾಗದೇವಿ ಕೈಗಾರಿಕಾ ಪ್ರದೇಶ, ನೀಲ್‍ಗಿರೀಶ್ ರಸ್ತೆ, ನೆಹರು ರಸ್ತೆ, ಅರವಿಂದ ನಗರ, ಮಂಗಳ ಲೇಔಟ್, ಹಳೆಮಿಲ್ ರಸ್ತೆ, ಬಾಣಸವಾಡಿ, ಒಎಂಬಿಆರ್ ಲೇಔಟ್, ವಿಜಯ ಬ್ಯಾಂಕ್ ಕಾಲನಿ, ರಾಮಮೂರ್ತಿ ನಗರ ಮುಖ್ಯ ರಸ್ತೆ, ಅಣ್ಣಯ್ಯ ರೆಡ್ಡಿ ಲೇಔಟ್, ಲಕ್ಷ್ಮಮ್ಮ ಲೇಔಟ್, ಪಿಲ್ಲಾರೆಡ್ಡಿ ನಗರ, ಈಸ್ಟ್ ಆಫ್ ಎನ್‍ಜಿಇಎಫ್, ಕಸ್ತೂರಿ ನಗರ, ಕ್ಯಾನೊಪಿ ಅಪಾರ್ಟ್ ಮೆಂಟ್ ಮಲ್ಲಪ್ಪ ಲೇಔಟ್, ಬ್ಯಾಂಕ್ ಅವೆನ್ಯೂ, ನಂಜಪ್ಪ ಲೇಔಟ್, ಚಿಕ್ಕ ಬಾಣಸವಾಡಿ, ಭುವನಗಿರಿ, ಸಿಎಂಆರ್ ಕಾಲೇಜು, ಮುನೇಶ್ವರ ದೇವಸ್ಥಾನ, ಗಣೇಶ ದೇವಸ್ಥಾನ, ಬಿಡಿಎ ಪಾರ್ಕ್, ಛಾಯಾ ಆಸ್ಪತ್ರೆ, ಡಾಕ್ಟರ್ಸ್ ಲೇಔಟ್, ಪಾಪಯ್ಯ ಲೇಔಟ್, ಎಸ್‍ಆರ್‍ಆರ್ ಛತ್ರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಎಸ್ಆರ್ಎಸ್ ವಿದ್ಯುತ್ ಸ್ವೀಕರಣಾ ಠಾಣೆಯಲ್ಲಿನ ನಿರ್ವಹಣಾ ಕಾರ್ಯಾಚರಣೆ ನಿಮಿತ್ತ ಪೀಣ್ಯ ಠಾಣೆಯ ವ್ಯಾಪ್ತಿಯಲ್ಲಿ ಅ.18ರಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹಳೆ ಕೆ.ಜಿ. ಹಳ್ಳಿ, ಕೈವಾರ ಟೆಂಪಲ್ ಶೆಟ್ಟಿಹಳ್ಳಿ ರಸ್ತೆ, ರಾಘವೇಂದ್ರ ಲೇಔಟ್, ಲಕ್ಷ್ಮಿಪುರ, ಲಕ್ಷ್ಮಿಪುರ ಕ್ರಾಸ್, ಸಿಎಸ್‍ಆರ್ ಲೇಔಟ್, ಆರ್‍ಕೆಆರ್ ಲೇಔಟ್, ಅಬ್ಬಿಗೆರೆ ಕೈಗಾರಿಕಾ ಪ್ರದೇಶ, ಸಿಂಗಾಪುರ ಗಾರ್ಡನ್, ಅಬ್ಬಿಗೆರೆ ದಿಣ್ಣೆ, ವೆಂಕಟೇಶ್ವರ ಲೇಔಟ್, ಸೂರಜ್ ಲೇಔಟ್, ಕೆಂಪೇಗೌಡ ಲೇಔಟ್, ಲಕ್ಷ್ಮಿ ದೇವಸ್ಥಾನ, ಕಲಾನಗರ, ಕೆ.ಜಿ. ಹಳ್ಳಿ, ಕುವೆಂಪುನಗರ, ಎಚ್‍ವಿವಿ ವ್ಯಾಲಿ,
ವರದರಾಜು ನಗರ, ಎಂ.ಎಸ್. ಪಾಳ್ಯ, ಚಿಕ್ಕಬೆಟ್ಟಹಳ್ಳಿ, ಬಾಲಾಜಿ ಲೇಔಟ್, ಎನ್‍ಟಿಐ ಲೇಔಟ್, ಸುಬ್ರಹ್ಮಣ್ಯ ಕಾಲೇಜು ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಬ್ರಿಗೇಡ್ ಗೇಟ್ ವೇ ಸ್ಟೇಷನ್: ಕ್ಲಬ್ ಹೌಸ್, ಫೊನೆಕ್ಸ್, ಜೆಮಿನಿ ಅಂಡ್ ಲಿಯೋ, ವೇಗಾಸ ಆಂಡ್ರೋಮಾ, ಲೈನಿಕ್ಸ್, ಓರಿಯನ್ ಮಾಲ್, ಶೆರ್ಟಾನ್ ಹೋಟೆಲ್, ಹರ್ಕುಲೆಸ್, ಡಾಲರ್, ಕೊರೊನಾ, ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್. ಬೃಂದಾವನ ಘಟಕ: ಪೀಣ್ಯ 3,4ನೇ ಹಂತ, ಬೃಂದಾವನ 3ನೇ ಫೇಸ್, ಶ್ರೀರಾಮಾ ಡೀಲಕ್ಸ್, ಕೃಷಿ ಇರಿಗೇಷನ್, ಸ್ಟೇಷನ್ ಆಕ್ಸಲರಿ, 4,5ನೇ ಮುಖ್ಯ ರಸ್ತೆ, 6,7ನೇ ಅಡ್ಡ ರಸ್ತೆ, ರಾಜ ಗೋಪಾಲ್ ನಗರ, ಪ್ರೇರಣಾ ಮೋಟಾರ್ಸ್, ಎನ್‍ಟಿಟಿಎಫ್ ರಸ್ತೆ, ಎನ್.ಜಿ. ಹಳ್ಳಿ, ಶಿವಪುರ ಸುತ್ತಮುತ್ತಲ ಪ್ರದೇಶ. ಕೆಎಚ್‍ಬಿ ಕಾಲನಿ ಘಟಕ: ಶಿವನಹಳ್ಳಿ, ಶ್ರೀನಿಧಿ ಲೇಔಟ್, ಬಿಡಬ್ಲ್ಯೂಎಸ್ ಎಸ್‍ಬಿ, ಕೆಂಚೇನಹಳ್ಳಿ, ಗಂಟಿಗನಹಳ್ಳಿ, ಹಾರೋಹಳ್ಳಿ, ಸುರದೇನಪುರ, ಸಾದೇನಹಳ್ಳಿ, ಇಸ್ರೋ ಲೇಔಟ್, ಅನಂತಪುರ, ಬೆಸ್ಕಾಂ, ಎಲ್‍ಬಿಎಸ್ ನಗರ, ಯಲಹಂಕ, ಎ.ಬಿ. ಸೆಕ್ಟರ್, ಆವಲಹಳ್ಳಿ, ಎಸ್.ಎನ್. ಹಳ್ಳಿ,, ರಾಜನಕುಂಟೆ, ಹೊನ್ನೇನಹಳ್ಳಿ, ನಾಗೇನಹಳ್ಳಿ, ಟೌನ್ ಸೆಂಟರ್, ಮೈಲಪ್ಪನಹಳ್ಳಿ, ನಾಗದಾಸನಹಳ್ಳಿ, ಮುದ್ದಾನಹಳ್ಳಿ, ಟನ್ ಸೆಂಟರ್, ಶಿರ್ಕೆ ಅಪಾರ್ಟ್‍ಮೆಂಟ್, ಬಿಎಂಎಸ್ ಹಾಸ್ಟೆಲ್, ನಾಗಾರ್ಜನ ಅಪಾರ್ಟ್‍ಮೆಂಟ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics