ಬ್ರಸ್ಸೆಲ್ಸ್: ಖ್ಯಾತ ಬೆಲ್ಜಿಯನ್ ಕಾರ್ಟೂನಿಸ್ಟ್ ಹರ್ಜ್ ಅವರ ಎರಡು ಪುಟದ ಟಿಂಟಿನ್ ಕಾಮಿಕ್ ಸ್ಟ್ರಿಪ್ ಹರಾಜಿನಲ್ಲಿ ೧.೭೨ ದಶಲಕ್ಷ ಡಾಲರ್ ಗಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಇದು ಬೆಲ್ಜಿಯಂನ ಕಾಮಿಕ್ ಸ್ಟ್ರಿಪ್ ಸಂಗ್ರಹಗಾರ ಜೀನ್ ಅರ್ನಾಲ್ಡ್ ಸ್ಕೂಫ್ಸ್ ಅವರಿಗೆ ಸೇರಿತ್ತೆಂದು ತಿಳಿದುಬಂದಿದೆ.
೧೯೩೯ ರಲ್ಲಿ ಲ ಪಿಟ್ ವಿಗ್ಟಿಮೆಯಲ್ಲಿ ಪ್ರಕಟವಾಗಿದ್ದ ಹರ್ಗ್ ಅವರ ಟಿಂಟಿನ್ ಕಾಮಿಕ್ ಸ್ಟ್ರಿಪ್ ಗೆ ಬಹಳ ಬೇಡಿಕೆಯಿತ್ತು ಎಂದು ತಿಳಿದುಬಂದಿದೆ.