ಮುಸ್ಲಿಂ ವೈಯಕ್ತಿಕ ಕಾನೂನು ಪರಿಶೀಲನೆ?
ಲಿಂಗ ತಾರತಮ್ಯವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ಮರು ಪರಿಶೀಲಿಸಲು ಸುಪ್ರೀಂ ಮುಂದಾಗಿದೆ. ಬಹುಪತ್ನಿತ್ವ...
ನವದೆಹಲಿ: ಲಿಂಗ ತಾರತಮ್ಯವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ಮರು ಪರಿಶೀಲಿಸಲು ಸುಪ್ರೀಂ ಮುಂದಾಗಿದೆ. ಬಹುಪತ್ನಿತ್ವ ಹಾಗೂ ಮೂರು ಬಾರಿ ತಲಾಖ್ ಹೇಳುವ ಪದ್ಧತಿಯ ಬಲಿಪಶುಗಳನ್ನು ಕಾಪಾಡಲು ಮುಂದಾಗಿರುವ ಕೋರ್ಟ್ನ ಈ ಕ್ರಮವಿವಾದದ ಜೇನುಗೂಡಿಗೆ ಕಲ್ಲೆಸೆಯಲಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿರುವ ಈ ಲಿಂಗ ತಾರತಮ್ಯಕ್ಕೆ ಮಂಗಳ ಹಾಡಿ ಸಾಂವಿಧಾನಿಕ ಸಮ್ಮತಿ ತರಲು ಸೂಕ್ತ ನ್ಯಾಯಪೀಠ ರಚಿಸುವಂತೆ ಸಿಜೆಐ ಎಚ್ ಎಲ್ ದತ್ತು ಅವರನ್ನು ನ್ಯಾ.ಎ.ಆರ್.ದವೆ ಮತ್ತು ನ್ಯಾ.ಎ.ಕೆ. ಗೋಯಲ್ ಅವರಿದ್ದ ಪೀಠ ವಿನಂತಿಸಿದೆ. ಈ ಕಾನೂನಿನಿಂದಾಗಿ ನಿರಂಕುಶ ವಿಚ್ಛೇದನ, ಒಂದು ಮದುವೆ ಚಾಲ್ತಿಯಲ್ಲಿರುವಾಗಲೇ ಪತಿ ಇನ್ನೊಂದು ಮದುವೆಯಾಗುವುದರಿಂದ ಮೊದಲ ಪತ್ನಿಗಾಗುವ ಅಸ್ಥಿರತೆ, ಘನತೆಯ ನಿರಾನಿರಾಕರಣೆಗಳಿಗೆ ಅಂಕುಶವಿಲ್ಲದಂತಾಗಿದೆ ಎಂದಿರುವ ಪೀಠ, ಈ ಕುರಿತು ನ.23ರೊಳಗೆ ಅಭಿಪ್ರಾಯ ನೀಡುವಂತೆ ಅಟಾರ್ನಿ ಜನರಲ್ ಹಾಗೂ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಾರಕ್ಕೆ ಸೂಚನೆ ನೀಡಿದೆ. ಖ್ಯಾತ ಇಸ್ಲಾಮಿಕ್ ವಿದ್ವಾಂಸ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ತಾಹಿರ್ ಮಹಮೂದ್ ಕೋರ್ಟ್ನ ಈ ನಡೆಯನ್ನು ಸ್ವಾಗತಿಸಿದ್ದಾರೆ.