ಗೌಹಾಟಿ: ಮನೆಗೆಲಸ ಮಾಡುವ ಬಾಲಕಿ ನೀಡಿರುವ ದೂರಿನ ಆಧಾರದ ಮೇಲೆ ಅಸ್ಸಾಮಿನ ಶಾಸಕ ಗೋಪಿನಾಥ್ ದಾಸ್ ವಿರುದ್ಧ ರೇಪ್ ಪ್ರಕರಣ ದಾಖಲಿಸಲಾಗಿದೆ.
ಬೋಕೊ ಕ್ಷೇತ್ರವನ್ನು ಪ್ರತಿನಿಧಿಸುವ ದಾಸ್, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರೆಟಿಕ್ ಫಂಡ್ ಪಕ್ಷದ ಸದಸ್ಯ,
ಸಂತ್ರಸ್ತೆ ಅಪ್ರಾಪ್ತ ಬಾಲಕಿಯಾಗಿದ್ದು, ಅವರು ಮತ್ತು ಅವರ ಕುಟುಂಬ ವರ್ಗ ಭಾನುವಾರ ಸಂಜೆ ದೂರು ದಾಖಲು ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಅಪ್ರಾಪ್ತೆಯನ್ನು ದಾಸ್ ಕೆಲವು ದಿನಗಳ ಹಿಂದೆ ತನ್ನ ವಾಹನದಲ್ಲಿ ರೇಪ್ ಮಾಡಿದ್ದರು ಎಂದು ದೂರಲಾಗಿದೆ.
"ಅಂದಿನಿಂದ ಅವರ ಮನೆಯಲ್ಲಿ ಬಾಲಕಿಯನ್ನು ಕೂಡಿಹಾಕಲಾಗಿತ್ತು. ಅವಳು ಅಲ್ಲಿಂದ ತಪ್ಪಿಸಿಕೊಂಡು ನಂತರವಷ್ಟೇ ವಿಷಯ ತಿಳಿದಿದ್ದು ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ. ದಾಸ್ ವಿರುದ್ಧ ಕಂರುಪ್ ನಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಭಾರತೀಯ ಕಾನೂನು ಸಂಹಿತೆಯ ೩೪೩ ಸೆಕ್ಷನ್, ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ದಾಸ್ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಕಂರುಪ್ ಪೋಲಿಸ್ ಆಯುಕ್ತ ಇಂದ್ರಾಣಿ ಬರುಚ್ ತಿಳಿಸಿದ್ದಾರೆ,
"ಈಗ ತನಿಖೆ ನಡೆಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಈ ಆಪಾದನೆಯನ್ನು ಅಲ್ಲಗೆಳೆದಿರುವ ದಾಸ್, ಮುಂದಿನ ವರ್ಷ ವಿಧಾನಸಭಾ ಚುನಾವಣೆಗಳು ಬರಲಿದ್ದು ನನ್ನ ವಿರುದ್ಧ ಮಸಿ ಬಳಿಯಲು ಈ ಪ್ರಯತ್ನ ನಡೆಸಲಾಗಿದೆ ಎಂದು ದೂರಿದ್ದಾರೆ.
"ಜೂನ್ ೨೮ ರಿಂದ ನನ್ನ ಗೌಹಾಟಿ ಮನೆಯಲ್ಲಿ ಬಾಲಕಿ ಕೆಲಸ ಮಾಡುತ್ತಿದ್ದಳು. ಶನಿವಾರ ರಾತ್ರಿಯಿಂದ ಕೆಲವು ಬಟ್ಟೆ ಮತ್ತು ದುಡ್ಡು ತೆಗೆದುಕೊಂಡು ಕಾಣೆಯಾಗಿದ್ದಳು. ನನ್ನ ಕುಟುಂಬ ನನಗೆ ಈ ವಿಷಯ ತಿಳಿಸಿತು. ಮುಂದಿನ ದಿನ ನಾನು ಬಾಲಕಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದೆ. ಈ ಮಧ್ಯ ಬಾಲಕಿಯ ಕುಟುಂಬ ನನ್ನ ವಿರುದ್ಧ ರೇಪ್ ಕೇಸ್ ದಾಖಲಿಸಿದೆ ಎಂದು ತಿಳಿದು ಬಂತು" ಎಂದು ದಾಸ್ ತಿಳಿಸಿದ್ದಾರೆ.