ನವದೆಹಲಿ: ಆಸಿಡ್ ದಾಳಿ ಪ್ರಕರಣಗಳ ಬಗ್ಗೆ ತನ್ನ ಆದೇಶವನ್ನು ಜಾರಿಗೊಳಿಸದ ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಬುಧವಾರ ನೋಟೀಸ್ ಜಾರಿ ಮಾಡಿದೆ.
ಕರ್ನಾಟಕ, ಮಿಜೋರಾಂ, ಕೇರಳ, ಮಧ್ಯಪ್ರದೇಶ ಮತ್ತು ಜಮ್ಮು-ಕಾಶ್ಮೀರದ ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ನಿಮ್ಮ ವಿರುದ್ಧ ನ್ಯಾಯಾಲಯ ನಿಂದನೆ ಕ್ರಮವನ್ನು ಏಕೆ ಜರುಗಿಸಬಾರದು ಎಂದು ಕೇಳಿ ನ್ಯಾಯಮೂರ್ತಿ ಎಂ.ವೈ. ಇಕ್ಬಾಲ್ ಅವರ ನೇತೃತ್ವದ ನ್ಯಾಯಪೀಠ ಪ್ರಶ್ನಿಸಿದೆ.
ಇದೊಂದು ಬಾರಿ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ನೀಡುವಂತೆ ಈ ರಾಜ್ಯಗಳ ವಕೀಲರು ಮಾಡಿದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ನೋಟೀಸ್ಗೆ ಉತ್ತರಿಸಲು ಮುಖ್ಯ ಕಾರ್ಯದರ್ಶಿಗಳಿಗೆ 2 ವಾರಗಳ ಗಡುವು ನೀಡಿದೆ.