೧೯ ಗಂಟೆಗಳ ಕಾರ್ಯಾಚರಣೆಯ ನಂತರ ಬೋರ್ವೆಲ್ ನಿಂದ ೨ ವರ್ಷದ ಕೂಸಿನ ರಕ್ಷಣೆ
ಉತ್ತರಪ್ರದೇಶದ ಶಿಕೋಹಾಬಾದ್ ಬೋರ್ವೆಲ್ ಒಂದಕ್ಕೆ ಬಿದ್ದಿದ್ದ ಎರಡು ವರ್ಷದ ಕೂಸನ್ನು ೧೯ ಗಂಟೆಗಳ ಕಾರ್ಯಾಚರಣೆಯ ನಂತರ ಶನಿವಾರ ರಕ್ಷಿಸಲಾಗಿದೆ.
ಶಿಕೋಹಾಬಾದ್: ಉತ್ತರಪ್ರದೇಶದ ಶಿಕೋಹಾಬಾದ್ ಬೋರ್ವೆಲ್ ಒಂದಕ್ಕೆ ಬಿದ್ದಿದ್ದ ಎರಡು ವರ್ಷದ ಕೂಸನ್ನು ೧೯ ಗಂಟೆಗಳ ಕಾರ್ಯಾಚರಣೆಯ ನಂತರ ಶನಿವಾರ ರಕ್ಷಿಸಲಾಗಿದೆ.
ರಾಜ್ಯ ಸರ್ಕಾರದ ಅಧಿಕಾರಿ ಸಿಬಂದಿಯ ಯಶಸ್ವಿ ಕಾರ್ಯಾಚರಣೆಯ ನಂತರ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ವೈದ್ಯರ ಪ್ರಕಾರ ಮಗುವಿಗೆ ಶ್ವಾಸಕೋಶ ಸೋಂಕು ತಗುಲಿದೆ ಆದರೆ ಉಳಿದಂತೆ
ಮಗು ಆರೋಗ್ಯವಾಗಿದೆ ಎಂದಿದ್ದಾರೆ.
ಮುಚ್ಚದ ಬೋರ್ವೆಲ್ ಒಂದಕ್ಕೆ ನೆನ್ನೆ ಸುಮಾರು ಮಧ್ಯಾಹ್ನ ೧೨ ಗಂಟೆಗೆ ಮಗು ಬಿದ್ದಿತ್ತು. ಆ ಬೋರ್ವೆಲ್ ನಿಂದ ಆಚೆಗೆ ೬೦ ಅಡಿಯ ಸುರಂಗ ಕೊರೆದು ಮಗುವನ್ನು ರಕ್ಷಿಸಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.