(ಸಾಂದರ್ಭಿಕ ಚಿತ್ರ) 
ಪ್ರಧಾನ ಸುದ್ದಿ

ಬಿಬಿಎಂಪಿ ಜುಟ್ಟು ಕೇಂದ್ರದ ಕೈಯಲ್ಲಿ

ಅನಿರೀಕ್ಷಿತವಾಗಿದ್ದೇನೂ ನಡೆಯದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ಮೈತ್ರಿ ಪರ್ವ ಪ್ರಾರಂಭವಾಯಿತು. ಅಧಿಕ ಸ್ಥಾನಗಳನ್ನು ಗೆದ್ದಿದ್ದರೂ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯಿಂದಾಗಿ ಬಿಜೆಪಿಯ ಮೇಯರ್ ಕನಸು ನನಸಾಗಲಿಲ್ಲ. ಸಂಸದರು, ಶಾಸಕರು...

ಗೃಹ ಇಲಾಖೆಯ ಬಳಿಯಿದೆ ವಿಭಜನೆ ವಿಧೇಯಕ ಪರಾಮರ್ಶೆಯ ಕೊಕ್ಕೆ

ಅನಿರೀಕ್ಷಿತವಾಗಿದ್ದೇನೂ ನಡೆಯದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ಮೈತ್ರಿ ಪರ್ವ ಪ್ರಾರಂಭವಾಯಿತು. ಅಧಿಕ ಸ್ಥಾನಗಳನ್ನು ಗೆದ್ದಿದ್ದರೂ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯಿಂದಾಗಿ ಬಿಜೆಪಿಯ ಮೇಯರ್ ಕನಸು ನನಸಾಗಲಿಲ್ಲ. ಸಂಸದರು, ಶಾಸಕರು, ಪರಿಷತ್ ಸದಸ್ಯರು ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಜಿದ್ದಿನ ರಾಜಕೀಯದ ಮುಖವನ್ನು ಅನಾವರಣಗೊಳಿಸಿದರು.

ಬೆಂಗಳೂರು:
ಪಾಲಿಕೆಯಲ್ಲಿ 100 ಸ್ಥಾನ ಗೆದ್ದರೂ ಬಿಜೆಪಿಯನ್ನು ವಿರೋಧಪಕ್ಷ ಸ್ಥಾನದಲ್ಲಿ ಕೂರಿಸಿದ ಕಾಂಗ್ರೆಸ್ ನೆಮ್ಮದಿಯಾಗೇನು ಇರುವ ಹಾಗಿಲ್ಲ. ಏಕೆಂದರೆ, ಹಾಲಿ ಬಿಬಿಎಂ
ಪಿ ಅಧಿಕಾರಾವಧಿಯ ಭವಿಷ್ಯ ಕೇಂದ್ರದ ಎನ್‍ಡಿಎ ಸರ್ಕಾರದ ಕೈಯಲ್ಲಿದೆ.

ಬಿಬಿಎಂಪಿಯನ್ನು ವಿಭಜಿಸುವ ಹಿನ್ನೆಲೆಯಲ್ಲಿ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಬಿಬಿಎಂಪಿ ವಿಭಜನೆ ವಿಧೇಯಕವನ್ನು ಶಾಸನ ಸಭೆಯಲ್ಲಿ ತಂದಿತು. ಬಿಜೆಪಿ ಮತ್ತು ಜೆಡಿಎಸ್‍ನ ತೀವ್ರ ವಿರೋಧದ ನಡುವೆಯೇ ವಿಧೇಯಕಕ್ಕೆ ಒಪ್ಪಿಗೆ ಪಡೆದುಕೊಂಡು ರಾಜ್ಯಪಾಲರ ಸಹಿಗೆ ಕಳುಹಿಸಲಾಯಿತು. ಇದೀಗ ರಾಜ್ಯಪಾಲರು ವಿಧೇಯಕವನ್ನು ರಾಷ್ಟ್ರಪತಿಗಳ ಅಂಗಳಕ್ಕೆ
ತಳ್ಳಿದ್ದಾರೆ.

ಗೃಹ ಇಲಾಖೆಯಲ್ಲಿ ಪರಾಮರ್ಶೆ:
ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯಲ್ಲಿ ಪರಾಮರ್ಶೆಗೊಳ್ಳಲಿದೆ. ಅಂದರೆ, ರಾಷ್ಟ್ರಪತಿ ಕಚೇರಿಯಿಂದ ಆ ವಿಧೇಯಕವು ಗೃಹ ಇಲಾಖೆಗೆ ರವಾನೆಯಾಗುತ್ತದೆ. ಅಲ್ಲಿಂದ ಕಾನೂನು ಇಲಾಖೆಯಲ್ಲಿ ಅಳೆದು ಸೋಸಿ ನೋಡಲಾಗುತ್ತದೆ. ಅಲ್ಲಿಂದಲೂ ಸಮ್ಮತಿ ಸಿಕ್ಕ ನಂತರ ಪುನಃ ಗೃಹ ಇಲಾಖೆ ಮೂಲಕ ರಾಷ್ಟ್ರಪತಿ ಭವನ ತಲುಪಿ, ರಾಷ್ಟ್ರಪತಿಗಳ ಸಹಿ ಹಾಕಲ್ಪಡುತ್ತದೆ.

ಇಲ್ಲೇ ಇರುವುದು ನೈಜ ಗುಟ್ಟು. ಒಂದು ವೇಳೆ ಬಿಜೆಪಿಯೇ ಬಿಬಿಎಂಪಿಯಲ್ಲಿ ಮೇಯರ್ ಗಿರಿ ಗಿಟ್ಟಿಸಿದ್ದರೆ ಈ ವಿಧೇಯಕವನ್ನು ಒಂದಷ್ಟು ವರ್ಷ ಪರಾಮರ್ಶೆ ಹೆಸರಿನಲ್ಲಿ ತಡೆಹಿಡಿದುಕೊಳ್ಳಲು ಅವಕಾಶವಿತ್ತು. ಏಕೆಂದರೆ ಯಾವುದೇ ವಿಧೇಯಕವನ್ನು ಇಂತಿಷ್ಟೇ ದಿನದಲ್ಲಿ ವಿಲೇವಾರಿ ಮಾಡ ಬೇಕೆಂಬ ನಿಯಮವೇನು ಇಲ್ಲ. ಅಲ್ಲದೇ ಪರಾಮರ್ಶೆ ಹೆಸರಿನಲ್ಲಿ ಮಾಹಿತಿಗಳನ್ನು ಬಯಸಿ ದಿನದೂಡಲು ಅವಕಾಶವಿತ್ತು. ಆದರೆ, ಈಗ ಕಾಂಗ್ರೆಸ್ ಮಾಡಿದ ನಿರ್ಧಾರದಿಂದಾಗಿ ಕೇಂದ್ರ ಸರ್ಕಾರವು ತರಾತುರಿಯಲ್ಲಿ ವಿಧೇಯಕವನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಲು ಅವಕಾಶ ಸಿಕ್ಕಂತಾಗಿದೆ.

ಆತಂಕದಲ್ಲೇ ಸದಸ್ಯರು: ಆದರೆ, ಈ ವಾದವನ್ನು ಬಿಜೆಪಿ ಮುಖಂಡರು ಒಪ್ಪುತ್ತಿಲ್ಲ. `ನಾವು ಬೆಂಗಳೂರು ವಿಭಜನೆಯನ್ನು ನಾವು ವಿರೋಧಿಸಿಕೊಂಡು ಬಂದಿದ್ದೇವೆ. ಅದೇನಿದ್ದರೂ ಕಾಂಗ್ರೆಸ್ ದಾರಿ. ಇನ್ಮೇಲೆ ಅವರೇ ಬಿಬಿಎಂಪಿ ವಿಭಜನೆಗೆ ಒತ್ತು ಕೊಡುತ್ತಾರೆ' ಎನ್ನುತ್ತಾರೆ. ಬಿಬಿಎಂಪಿ ವಿಭಜನೆಯ ಗುಮ್ಮ ಅಧಿಕಾರದ ಮೊದಲ ದಿನದಿಂದಲೇ ಆವರಿಸಿಕೊಂಡಂತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ