ನಟ ಸುದೀಪ್ 
ಪ್ರಧಾನ ಸುದ್ದಿ

ಸುದೀಪ್ -ಪ್ರಿಯಾ ವಿಚ್ಛೇದನಕ್ಕೆ ಯಾರು ಕಾರಣ...?

ಶುಕ್ರವಾರ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೂಲಕ ಸುದ್ದಿಗೆ ಗ್ರಾಸವಾಗಿರುವ...

ಬೆಂಗಳೂರು: ಶುಕ್ರವಾರ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೂಲಕ ಸುದ್ದಿಗೆ ಗ್ರಾಸವಾಗಿರುವ ಕನ್ನಡದ ಖ್ಯಾತ ನಟ ಸುದೀಪ್ ಇಂದು ಟ್ವಿಟ್ಟರ್ ನಲ್ಲಿ ಈ ಕುರಿತು  ಸರಣಿ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಸಂದೇಹಗಳಿಗೆ ಉತ್ತರ ಕೊಡಲು ಪ್ರಯತ್ನಿಸಿದ್ದಾರೆ.

'' ನನ್ನ ಜೀವನದ ಬೆಳವಣಿಗೆ ಬಗ್ಗೆ ಅನೇಕ ಚಾನೆಲ್ ಗಳು ಮತ್ತು ಪತ್ರಿಕೆಗಳ ಜೊತೆ ಮಾತನಾಡಿದ್ದೇನೆ. ನಾನು ಈ ವಿಷಯವನ್ನು ಮುಚ್ಚಿಡಲು ಅಥವಾ ಪರಿಸ್ಥಿತಿಯಿಂದ ಓಡಿಹೋಗಲು ಇಚ್ಛಿಸುವುದಿಲ್ಲ. ನನ್ನ ಬಗ್ಗೆ ಇರುವ ಕಾಳಜಿ ಮತ್ತು ನಿಮಗಿರುವ ಕುತೂಹಲದ ಬಗ್ಗೆ ನನಗೆ ಅರ್ಥವಾಗುತ್ತದೆ. ನನ್ನ ಕುಟುಂಬಕ್ಕೆ ನಿಮ್ಮ ಪ್ರೀತಿಯ ಬೆಂಬಲದ ಅಗತ್ಯವಿದೆ ಎಂದು ಹೇಳಿದ್ದಾರೆ. ಇನ್ನೊಂದು ಟ್ವೀಟ್ ನಲ್ಲಿ, ನನ್ನ ಇಂದಿನ ಈ ಸ್ಥಿತಿಗೆ ಯಾರು ಹೊಣೆಗಾರರೋ ಅವರಿಗೂ ನನ್ನ ಧನ್ಯವಾದಗಳು, ಅವರಿಗೆ ಒಳ್ಳೆಯದಾಗಲಿ, ಸಂತೋಷವಾಗಿರಿ, ನನಗೆ ಆಶೀರ್ವಾದ ಮಾಡಿ ಎಂದು ಹೇಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

2001ರಲ್ಲಿ ಸುದೀಪ್ ಕೇರಳ ಮೂಲದ ನಾಯರ್ ಕುಟುಂಬದ ಪ್ರಿಯಾ ರಾಧಕೃಷ್ಣನ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇಬ್ಬರಿಗೂ 11 ವರ್ಷದ ಮಗಳು ಸಾನ್ವಿ ಇದ್ದು, ಆಕೆಯನ್ನು ಪತ್ನಿ ಪ್ರಿಯ ಸುಪರ್ದಿಗೆ ನೀಡಲು ಸುದೀಪ್ ಒಪ್ಪಿದ್ದಾರೆ. ಅಲ್ಲದೇ ಇಬ್ಬರ ಜೀವನಾಂಶಕ್ಕೆ 19 ಕೋಟಿ ನೀಡಲು ಒಪ್ಪಿದ್ದಾರೆನ್ನಲಾಗಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

SIR ಅಕ್ರಮ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ