ಬೆಂಗಳೂರು: ಗಣೇಶ ಚತುರ್ಥಿ ಹಿನ್ನೆಲೆ ಗುರುವಾರ ಬೆಂಗಳೂರಿನಲ್ಲಿ ಮಾಂಸ ಮಾರಾಟಕ್ಕೆ ಬ್ರೇಕ್ ಬಿದ್ದಿದೆ.
ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನಾಂಕ 17 ಗುರುವಾರ ಗಣೇಶ ಚತುರ್ಥಿ ದಿನ ಪ್ರಯುಕ್ತ ಪ್ರಾಣಿಗಳ ವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಪಶುಪಾಲನ ವಿಭಾಗದ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಗಣೇಶ ಚತುರ್ಥಿ ಹಬ್ಬಕ್ಕೆ ನಿಷೇಧ ಮಾಡುವ ಪದ್ಧತಿ ಹಲವು ವರ್ಷಗಳಿಂದ ನಡೆದುಬಂದಿದೆ. ಅದೇ ರೀತಿ ಈ ಬಾರಿಯೂ ಮಾಂಸ ನಿಷೇಧ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಒಟ್ಟು 9 (ಮಹಾವೀರ ಜಯಂತಿ, ಬುದ್ದ ಪೂರ್ಣಿಮಾ, ಗಾಂಧಿ ಜಯಂತಿ, ಕೃಷ್ಣಾ ಜನ್ಮಾಷ್ಟಮಿ, ರಾಮನವಮಿ, ಗಣೇಶ ಚತುರ್ಥಿ, ಶಿವರಾತ್ರಿ, ಸರ್ವೋದಯ ದಿನ, ಅಂಬೇಡ್ಕರ್ ಜಯಂತಿ) ರಾಷ್ಟ್ರೀಯ ಹಾಗೂ ಹಬ್ಬದ ದಿನ ಮಾಂಸ ನಿಷೇಧ ಜಾರಿಯಲ್ಲಿದೆ.
ಮಾಂಸ ನಿಷೇಧ ವಾಪಸ್ ಬಗ್ಗೆ ಚಿಂತನೆ
ಹಿಂದಿನ ಸಂಪ್ರದಾಯದಂತೆ ಗಣೇಶ ಚತುರ್ಥಿಯಂದು ಮಾಂಸ ಮಾರಾಟ ನಿಷೇಧ ವಿಧಿಸಲಾಗಿದೆ. ಆದರೆ, ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿಲ್ಲ. ಮುಂದಿನ ಹಬ್ಬಗಳಿಗೆ ಈ ನಿಷೇಧ ವಾಪಸ್ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.