ಪ್ರಧಾನ ಸುದ್ದಿ

ಮೀಸಲಾತಿ ಬಗ್ಗೆ ಮೋಹನ್ ಭಾಗವತ್ ಹೇಳಿಕೆ ಸಂವಿಧಾನಕ್ಕೆ ವಿರುದ್ಧ: ಜೆಡಿಯು

Srinivas Rao BV

ನವದೆಹಲಿ: ಮೀಸಲಾತಿ ನಿಯಮವನ್ನು ಪರಾಮರ್ಶಿಸುವ ಬಗ್ಗೆ ಆರ್ ಎಸ್ಎಸ್ ಮುಖಂಡ ಮೋಹನ್ ಭಾಗವತ್ ನೀಡಿದ್ದ ಹೇಳಿಕೆ ವಿರುದ್ಧ ಜೆಡಿಯು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಎಸ್.ಸಿ, ಎಸ್.ಟಿ ಹಾಗೂ ಹಿಂದುಳಿದ ವರ್ಗದ ಜನರನ್ನು ಬಲಹೀನಗೊಳಿಸುವ ಯತ್ನ ಎಂದು ಆರೋಪಿಸಿದೆ.

ಮೀಸಲಾತಿ ನಿಯಮವನ್ನು ಪರಾಮರ್ಶಿಸಲು ಸಮಿತಿ ರಚನೆ ಮಾಡುವ ಪ್ರಸ್ತಾವನೆಯನ್ನು ಜೆಡಿಯು ತಿರಸ್ಕರಿಸಿದ್ದು, ಮೀಸಲಾತಿಯಾ ಗುರಿ ಇನ್ನೂ ತಲುಪಿಲ್ಲ. ಈ ಹಂತದಲ್ಲಿ ನಿಯಮಗಳನ್ನು ಪರಿಶೀಲಿಸಿದರೆ ಅದರಿಂದ ಎಸ್.ಸಿ, ಎಸ್.ಟಿ ಹಾಗೂ ಹಿಂದುಳಿದ ವರ್ಗದ ಜನರು ಬಲಹೀನಗೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟಿದೆ.

ಅಂಬೇಡ್ಕರ್, ಗಾಂಧಿ ಅವರ ಸಲಹೆಯಂತೆ ಮೀಸಲಾತಿಯನ್ನು ಸಂವಿಧಾನದಲ್ಲಿ ಜಾರಿಗೊಳಿಸಲಾಗಿದೆ. ಸಂವಿಧಾನ ರಚನೆ ಪ್ರಕ್ರಿಯೆಯಲ್ಲಿ ಆರ್.ಎಸ್.ಎಸ್ ಸಕ್ರಿಯವಾಗಿ ಪಾಲ್ಗೊಂಡಿರಲಿಲ್ಲ. ಆರ್.ಎಸ್.ಎಸ್ ಸಂವಿಧಾನದ ಸ್ಪೂರ್ತಿಗೆ ವಿರುದ್ಧವಾಗಿತ್ತು ಎಂದು ಜೆಡಿಯು ನಾಯಕ ಕೆ.ಸಿ ತ್ಯಾಗಿ ಹೇಳಿದ್ದಾರೆ.

SCROLL FOR NEXT