ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ 
ಪ್ರಧಾನ ಸುದ್ದಿ

ಬಿಹಾರ ಚುನಾವಣೆಯಲ್ಲಿ ಇಬ್ಬರು ಲಾಲು ಮಕ್ಕಳು ಕಣಕ್ಕೆ

ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ತಮ್ಮಿಬ್ಬರು ಮಕ್ಕಳು ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರನ್ನು ಬಿಹಾರ ವಿಧಾನಸಭಾ

ಪಾಟ್ನಾ: ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ತಮ್ಮಿಬ್ಬರು ಮಕ್ಕಳು ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರನ್ನು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದಾರೆ.

ಜನತಾ ದಳ ಸಂಯುಕ್ತ, ರಾಷ್ಟ್ರೀಯ ಜನತಾ ದಳ ಮತ್ತು ಕಾಂಗ್ರೆಸ್ ಪಕ್ಷಗಳ ಮಹಾ ಮೈತ್ರಿ ಬುಧವಾರ ಬಿಡುಗಡೆ ಮಾಡಿದ ೨೪೨ ಅಭ್ಯರ್ಥಿಗಳ ಪಟ್ಟಿಯಲ್ಲಿ ಇವರಿಬ್ಬರು ಹೆಸರು ಕಾಣಿಸಿಕೊಂಡಿದೆ.

ಹಿರಿಯ ಮಗ ತೇಜ್ ಪ್ರತಾಪ್ ಯಾದವ್ (೨೭) ಮಹುವಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ ಮತ್ತೊಬ್ಬ ಮಗ ತೇಜಸ್ವಿ ಯಾದವ್ (೨೫) ರಾಘೋಪುರ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಪಾಟ್ನಾಗೆ ಹತ್ತಿರದಲ್ಲೇ ಇರವ ವೈಶಾಲಿ ಜಿಲ್ಲೆಯಲ್ಲಿ ಮಹುವಾ ಮತ್ತು ರಾಘೋಪುರ್ ಅಕ್ಕ ಪಕ್ಕದ ಕ್ಷೇತ್ರಗಳಾಗಿದ್ದು ಆರ್ ಜೆ ಡಿಗೆ ಸುರಕ್ಷಿತ ಕ್ಷೇತ್ರಗಳು ಎನ್ನಲಾಗುತ್ತದೆ.

ರಾಘೋಪುರದಲ್ಲಿ ಲಾಲು ಪ್ರಸಾದ್ ಮತ್ತು ಅವರ ಪತ್ನಿ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ೧೯೯೫ ಮತ್ತು ೨೦೧೦ರ ನಡುವೆ ಹಲವಾರು ಚುನಾವಣೆಗಳನ್ನು ಗೆದ್ದಿದ್ದಾರೆ.

ಕ್ರಿಕೆಟರ್ ಆಗಿ ಈಗ ರಾಜಕೀಯಕ್ಕೆ ಭಡ್ತಿ ಪಡೆದಿರುವ ತೇಜಸ್ವಿ ಯಾದವ್ ಆರ್ ಜೆ ಡಿ ಪಕ್ಷದಲ್ಲಿ ಜನಪ್ರಿಯ ಮುಖ. ಅವರು ಪಶ್ಚಿಮ ಚಂಪರನ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಜೊತೆ ಇತ್ತೀಚೆಗಷ್ಟೇ ಕಾಣಿಸಿಕೊಂಡಿದ್ದರು.

ರಾಘೋಪುರದಲ್ಲಿ ಕಳೆದ ಬಾರಿ ಜೆಡಿಯು ಇಂದ ಸ್ಪರ್ಧಿಸಿ ಗೆದ್ದಿದ್ದ ಸತೀಶ್ ಯಾದವ್ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಅವರು ಬಿಜೆಪಿ ಸೇರಿದ್ದಾರೆ ಹಾಗು ಬಿಜೆಪಿಯಿಂದ ಟಿಕೆಟ್ ಪಡೆದಿದ್ದಾರೆ.

೨೦೧೦ರಲ್ಲಿ ರಾಬ್ಡಿ ದೇವಿಯವರನ್ನು ೬೩೦೦೦ ಮತಗಳ ಅಂತರದೊಂದಿಗೆ ಸತೀಶ್ ಸೋಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!