ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೆಕ್ಕಾದಲ್ಲಿ ಮತ್ತೊಂದು ಭೀಕರ ದುರಂತ: ಹಜ್ ಯಾತ್ರೆ ವೇಳೆ ಕಾಲ್ತುಳಿತ, 220 ಯಾತ್ರಿಕರು ಸಾವು

ಸೌದಿ ಅರೇಬಿಯಾದಲ್ಲಿರುವ ಮೆಕ್ಕಾದ ಮಸೀದಿ ಬಳಿ ಪವಿತ್ರ ಹಜ್ ಯಾತ್ರೆ ವೇಳೆ ಕಾಲ್ತುಳಿತ ಸಂಭವಿಸಿ 150 ಯಾತ್ರಿಕರು ಮೃತಪಟ್ಟಿದ್ದಾರೆ ಮತ್ತು 390ಕ್ಕೂ ಹೆಚ್ಚು...

ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ (ಚಿತ್ರ ಕೃಪೆ- Tweeted by @ksa_998)
Lingaraj Badiger
Updated On : 24 Sept 2015, 3:12 am

ದುಬೈ: ಸೌದಿ ಅರೇಬಿಯಾದಲ್ಲಿರುವ ಮೆಕ್ಕಾದ ಮಸೀದಿ ಬಳಿ ಪವಿತ್ರ ಹಜ್ ಯಾತ್ರೆ ವೇಳೆ ಕಾಲ್ತುಳಿತ ಸಂಭವಿಸಿ ಕನಿಷ್ಠ 220 ಯಾತ್ರಿಕರು ಮೃತಪಟ್ಟಿದ್ದಾರೆ ಮತ್ತು 400ಕ್ಕೂ ಹೆಚ್ಚು ಯಾತ್ರಿಕರು ತೀವ್ರವಾಗಿ ಗಾಯಗೊಂಡಿರುವ ದುರ್ಘಟನೆ ಗುರುವಾರ ನಡೆದಿದೆ.

ಮೆಕ್ಕಾದಿಂದ ಸುಮಾರು 5 ಕಿ.ಮೀ.ದೂರದಲ್ಲಿರುವ ಮೀನಾದಲ್ಲಿ ಈ ದುರಂತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಪರಸ್ಥಿತಿ ನಿಯಂತ್ರಣದಲ್ಲಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಕ್ರೀದ್ ಹಬ್ಬದ ಪ್ರಾರ್ಥನೆ ವೇಳೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೆಕ್ಕಾದಲ್ಲಿ ಕಳೆದ 15 ದಿನಗಳಲ್ಲಿ ಸಂಭವಿಸಿದ ಎರಡನೇ ಭೀಕರ ದುರಂತ ಇದಾಗಿದ್ದು, ಸೆಪ್ಟೆಂಬರ್ 12ರಂದು ಕ್ರೇನ್ ಕುಸಿದು 107 ಮಂದಿ ಮೃತಪಟ್ಟಿದ್ದರು. ಈಗ ಬಕ್ರೀದ್ ಮುನ್ನಾ ದಿನ ಮತ್ತೊಂದು ದುರಂತ ಸಂಭವಿಸಿದೆ.

ರಾಜ್ಯದಿಂದ  6 ಸಾವಿರ ಮಂದಿ ಹಜ್ ಯಾತ್ರೆಗೆ
ಈ ಬಾರಿ ಕರ್ನಾಟಕದಿಂದ ಸುಮಾರು 6.400 ಮಂದಿ ಹಜ್ ಯಾತ್ರೆಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕ ಸೇರಿದಂತೆ ಭಾರತದಿಂದ ಸುಮಾರು 1,20,000 ಮಂದಿ ಹಜ್ ಯಾತ್ರೆಗೆ ತೆರಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement