ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ರಾಂಚಿ ಉದ್ವಿಗ್ನ; ಶಾಲೆಗಳಿಗೆ ರಜ

ನಾಲ್ಕು ದಿನಗಳ ಹಿಂದೆ ದೇವಾಲಯವೊಂದರ ಆವರಣದಲ್ಲಿ ದನದ ಮಾಂಸ ಕಂಡು ಬಂದ ಹಿನ್ನಲೆಯಲ್ಲಿ ಉಂಟಾದ ಕೋಮು ಘರ್ಷಣೆಗಳಿಂದ ರಾಂಚಿ ಇನ್ನೂ ಉದ್ವಿಗ್ನಗೊಂಡಿದ್ದು

ರಾಂಚಿ: ನಾಲ್ಕು ದಿನಗಳ ಹಿಂದೆ ದೇವಾಲಯವೊಂದರ ಆವರಣದಲ್ಲಿ ದನದ ಮಾಂಸ ಕಂಡು ಬಂದ ಹಿನ್ನಲೆಯಲ್ಲಿ ಉಂಟಾದ ಕೋಮು ಘರ್ಷಣೆಗಳಿಂದ ರಾಂಚಿ ಇನ್ನೂ ಉದ್ವಿಗ್ನಗೊಂಡಿದ್ದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಮತ್ತು ಅಧಿಕಾರಿಗಳು ಕಣ್ಗಾವಲನ್ನು ಹೆಚ್ಚಿಸಿದ್ದಾರೆ.

ಸೋಮವಾರ ಮಧ್ಯರಾತ್ರಿಯ ನಂತರ ಒಂದು ಕೋಮಿನ ಜನ ಚೂಪಾದ ಆಯುಧಗಳನ್ನು ಬಳಸಿ ಮತ್ತೊಂದು ಕೋಮಿನ ಜನರ ಮೇಲೆ ದಾಳಿ ಮಾಡಿರುವುದಲ್ಲದೆ, ಡೊರಾಂದ ಪ್ರದೇಶದಲ್ಲಿ ಅವರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಜನರ ಓಡಾಟಕ್ಕೆ ಅಧಿಕಾರಿಗಳು ನಿಯಂತ್ರಣ ಹೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ನಾಲ್ಕು ಜನರನ್ನು ಈಗಾಗಲೇ ಬಂದಿಸಿದ್ದು ಇನ್ನೂ ಹೆಚ್ಚಿನ ಜನರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಮಳಿಗೆಗಳು ಮುಚ್ಚಿದ್ದವು.

ಪೊಲೀಸರ ಪ್ರಕಾರ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದ್ದರೂ ಇನ್ನು ಉದ್ವಿಗ್ನತೆ ಇದೆ.

ಶಾಂತಿ ಸೌಹಾರ್ದತೆ ಕಾಪಾಡಲು ರಾಜ್ಯಸರ್ಕಾರ ಪ್ರಾದೇಶಿಕ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. ಈ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT