ಪ್ರಧಾನ ಸುದ್ದಿ

ಸಿಎಂಗೆ ನೂತನ ನಿವಾಸ ನಿರ್ಮಾಣ ಪ್ರಸ್ತಾಪ ಕೈಬಿಟ್ಟ ಪಿಡಬ್ಲ್ಯೂಡಿ

Lingaraj Badiger

ಬೆಂಗಳೂರು: ಬರಗಾಲದಲ್ಲೂ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಮುಖ್ಯಮಂತ್ರಿಗಳಿಗೆ ನೂತನ ಅಧಿಕೃತ ನಿವಾಸ ಮತ್ತು ಗೃಹ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದ ಲೋಕೋಪಯೋಗಿ ಇಲಾಖೆ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಸ್ತಾಪವನ್ನು ಕೈ ಬಿಡಲಾಗಿದೆ ಎಂದು ಸಿಎಂ ಕಚೇರಿಯ ಮೂಲಗಳು ತಿಳಿಸಿವೆ.

ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ನವೀಕರಣಗೊಳಿಸಿ ಎರಡು ವರ್ಷ ತುಂಬುವುದಕ್ಕೆ ಮೊದಲೇ ಇನ್ನೊಂದು ಕಂತಿನಲ್ಲಿ ಹೊಸ ಕಟ್ಟಡದ ನಿರ್ಮಾಣದ ಬಗ್ಗೆ ಲೋಕೋಪಯೋಗಿ ಇಲಾಖೆ ಚಿಂತನೆ ನಡೆಸಿತ್ತು.

ಹೌದು. ರಾಜ್ಯದಲ್ಲಿ ಹಲವು ದಶಕಗಳಿಂದ ಕಾವೇರಿ ಮತ್ತು ಅನುಗ್ರಹವನ್ನು ಮುಖ್ಯಮಂತ್ರಿ ಹುದ್ದೆಗೆ ಏರಿದವರು ಅಧಿಕೃತ ನಿವಾಸವನ್ನಾಗಿ ಮಾಡಿಕೊಳ್ಳುತ್ತಾರೆ. ಕೃಷ್ಣಾವನ್ನು ಗೃಹ ಕಚೇರಿಯಾಗಿ ಬಳಸಿಕೊಳ್ಳುತ್ತಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ಮಾತ್ರ ಅನುಗ್ರಹ ಮತ್ತು ಕಾವೇರಿ ವಾಸ್ತವ್ಯಕ್ಕೆ ಅಷ್ಟೊಂದು ಉತ್ಸುಕರಾಗಿರಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತ್ಯೇಕ ನಿವಾಸ ನಿರ್ಮಾಣ ಮಾಡಿಕೊಡುವುದಕ್ಕೆ ಪಿಡಬ್ಲ್ಯೂಡಿ ಚಿಂತನೆ ನಡೆಸಿತ್ತು.

ಈಗಿನ ಸಿಐಡಿ ಕಚೇರಿ ಇರುವ ಆವರಣದಲ್ಲಿ ಅತ್ಯುತ್ಕೃಷ್ಟ ಭವನ ನಿರ್ಮಾಣಕ್ಕೆ ಆರಂಭದಲ್ಲಿ ಜಾಗ ಗುರುತಿಸಲಾಗಿತ್ತು. ಆದರೆ ಅಲ್ಲಲ್ಲಿ ಅಪಸ್ವರ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಸ್ತಾಪವನ್ನು ಕೈ ಬಿಡಲಾಗಿದೆ.

SCROLL FOR NEXT