ಆಂಕಾರಾ: ಇರಾಕ್ ನ ಮೋಸುಲ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಂಟನೆ ೨೦೧೪ ರಿಂದ ಆಕ್ರಮಿಸಿಕೊಂಡಿದ್ದ ಟರ್ಕಿ ರಾಯಭಾರಿ ಕಚೇರಿಯ ಆವರಣ ಅಮೆರಿಕಾ ಮುಂದಾಳತ್ವದ ಮೈತ್ರಿ ರಾಷ್ಟ್ರಗಳು ನಡೆಸಿದ ದಾಳಿಯಲ್ಲಿ ನಾಶವಾಗಿದೆ.
ಐಸಿಸ್ ನ ಉನ್ನತ ಮಟ್ಟದ ಭಯೋತ್ಪಾದಕರು ಅಡಗಿದ್ದ ಆವರಣವನ್ನು ಗುರಿಯಾಗಿಸಿಕೊಂಡು ನಡೆದ ವಾಯು ದಾಳಿಯಲ್ಲಿ ಸೋಮವಾರ ಪ್ರಾದೇಶಿಕ ಸಮಯ ೩:೦೦ ಘಂಟೆಗೆ ಆವರಣವನ್ನು ನಾಶಗೊಳಿಸಲು ಯಶಸ್ವಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
"ಈ ಕಾರ್ಯಾಚರಣೆ ನಡೆಸುವಾಗ ಎಲ್ಲ ಹಂತದಲ್ಲೂ ಟರ್ಕಿ ದೇಶದ ಸೂಚನೆಗಳನ್ನು ಮತ್ತು ಒಪ್ಪಿಗೆಯನ್ನು ಪಡೆಯಲಾಗಿತ್ತು" ಎಂದು ಹೇಳಿಕೆ ತಿಳಿಸಿದೆ.
"ಅಂತರಾಷ್ಟ್ರೀಯ ಮೈತ್ರಿಯೊಂದಿಗೆ ಐ ಎಸ್ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ" ಎಂದು ಹೇಳಿಕೆ ತಿಳಿಸಿದೆ. ಜೂನ್ ೨೦೧೪ ರಲ್ಲಿ ಟರ್ಕಿ ರಾಯಭಾರಿ ಕಚೇರಿ ಮೇಲೆ ದಾಳಿ ನಡೆಸಿದ್ದ ಐ ಎಸ್ ಭಯೋತ್ಪಾದಕ ಸಂಘಟನೆ ೪೯ ಜನ ಸಿಬ್ಬಂದಿಗಳನ್ನು ಮತ್ತು ಕುಟುಂಬ ವರ್ಗದವರನ್ನು ಅಪಹರಿಸಿತ್ತು.