ಬರಪೀಡಿತ ಟೀಕಾಮಾರ್ಗ್ ಜಿಲ್ಲೆಯಲ್ಲಿ ನೀರು ಕಾಯಲು ಶಾಸ್ತ್ರಾಸ್ತ್ರ ಸಹಿತ ಸಿಬ್ಬಂದಿ 
ಪ್ರಧಾನ ಸುದ್ದಿ

ಬರಪೀಡಿತ ಮಧ್ಯಪ್ರದೇಶದಲ್ಲಿ ನೀರು ಕಾಯಲು ಶಾಸ್ತ್ರಾಸ್ತ್ರ ಸಹಿತ ಸಿಬ್ಬಂದಿ

ಬಿರು ಬೇಸಿಗೆಯಲ್ಲಿ ದೇಶದೆಲ್ಲೆಡೆ ನೀರಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಪರಿಸ್ಥಿತಿಯಲ್ಲಿ ಮಧ್ಯಪ್ರದೇಶದ ಬರಪೀಡಿತ ಟೀಕಾಮಾರ್ಗ್ ಜಿಲ್ಲೆಯಲ್ಲಿ ಜಾಮ್ನಿ ನದಿಯ ನೀರು ಕಾಯಲು ಮತ್ತು ಉತ್ತರಪ್ರದೇಶದ ರೈತರು

ಟೀಕಾಮಾರ್ಗ್: ಬಿರು ಬೇಸಿಗೆಯಲ್ಲಿ ದೇಶದೆಲ್ಲೆಡೆ ನೀರಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಪರಿಸ್ಥಿತಿಯಲ್ಲಿ ಮಧ್ಯಪ್ರದೇಶದ ಬರಪೀಡಿತ ಟೀಕಾಮಾರ್ಗ್ ಜಿಲ್ಲೆಯಲ್ಲಿ ಜಾಮ್ನಿ ನದಿಯ ನೀರು ಕಾಯಲು ಮತ್ತು ಉತ್ತರಪ್ರದೇಶದ ರೈತರು ನೀರು ಕದಿಯದಂತೆ ತಡೆಯಲು ರಾಜ್ಯದ ಆಡಳಿತಶಾಹಿ ಶಸ್ತ್ರಾಸ್ತ್ರ ಸಹಿತ ಸಿಬ್ಬಂದಿಯನ್ನು ನೇಮಿಸಿದೆ.

ಬುಂದೇಲಖಂಡ ಪ್ರದೇಶದಲ್ಲಿರುವ ಟೀಕಾಮಾರ್ಗ್ ನಲ್ಲಿ ನೀರಿಗಾಗಿ ಕಾದಾಟಗಳು ಮತ್ತು ಉದ್ವಿಗ್ನ ಸನ್ನಿವೇಶಗಳು ಸಾಮಾನ್ಯವಾಗಿವೆ.

ಪ್ರತಿ ನಾಲ್ಕು ದಿನಗಳಿಗೊಮ್ಮೆ ಮಾತ್ರ ನೀರಿನ ಟ್ಯಾಂಕರ್ ಮಾತು ಪೈಪ್ಲೈನ್ ಮೂಲಕ ಪುರಸಭೆ ನೀರು ಸರಬರಾಜು ಮಾಡುವುದರಿಂದ ನೀರಿಗಾಗಿ ಕಾದಾಟಗಳು ಸಾಮಾನ್ಯವಾಗಿವೆ.

ಕಳೆದ ಮೂರು ವರ್ಷಗಳಿಂದ ಬರಪೀಡಿದ ಟೀಕಾಮಾರ್ಗ್ ನಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಜಿಲ್ಲೆಯಲ್ಲಿ ಜನಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚಿದ್ದು, ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು ಪರಿಸ್ಥಿತಿ ದಿನೇದಿನಕ್ಕೆ ಕರಾಳವಾಗುತ್ತಿದೆ.

ಆದುದರಿಂದ ಪುರಸಭೆ ಜಾಮ್ನಿಯಲ್ಲಿ ಉಳಿದಿರುವ ನೀರನ್ನು ಸಂರಕ್ಷಿಸಲು ಅನ್ಯ ಮಾರ್ಗವಿಲ್ಲದೆ ಶಸ್ತ್ರಾಸ್ತ್ರ ಸಹಿತ ಸಿಬ್ಬಂದಿಯನ್ನು ನೇಮಿಸಿದೆ.

೮ ಘಂಟೆಯ ಪಾಳೆಯಗಳಲ್ಲಿ ಈ ಸಿಬ್ಬಂದಿಗಳು ದಿನ ರಾತ್ರಿ ನೀರನ್ನು ಕಾಯುತ್ತಿದ್ದಾರೆ ಎನ್ನಲಾಗಿದೆ.

ರೈತರು ನೀರು ಕದಿಯದಂತೆ ತಡೆಯಲು ೧೦ ಜನ ಶಸ್ತ್ರಾಸ್ತ್ರ ಸಹಿತ ಸಿಬ್ಬಂದಿಗಳನ್ನು ನೇಮಿಸಿದ್ದೇವೆ ಎಂದು ನಗರ ಪಾಲಿಕೆ ಅಧ್ಯಕ್ಷ ಲಕ್ಷ್ಮಿ ಗಿರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel