ಪ್ರಧಾನ ಸುದ್ದಿ

ಎನ್ ಐ ಟಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಖಂಡಿಸಿದ ರಾಹುಲ್ ಗಾಂಧಿ

Guruprasad Narayana

ನವದೆಹಲಿ: ಶ್ರೀನಗರ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ ಐ ಟಿ) ವಿದ್ಯಾರ್ಥಿಗಳ ವಿರುದ್ಧ ಪೊಲೀಸ ಪಡೆಯನ್ನು ಬಳಸಿರುವುದನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಖಂಡಿಸಿದ್ದಾರೆ.

"ದಯವಿಟ್ಟು ವಿದ್ಯಾರ್ಥಿಗಳನ್ನು ಆಲಿಸಿ ಮತ್ತು ಅವರ ತೊಂದರೆಗಳನ್ನು ಹಾಗು ಅವರ ಬೇಡಿಕೆಗಳನ್ನು ಅರ್ಥ ಮಾಡಿಕೊಳ್ಳಿ, ಅವರು ಎಲ್ಲಕ್ಕೂ ತಲೆಬಾಗುವಂತೆ ಹೆದರಿಸಬೇಡಿ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

"ಎನ್ ಐ ಟಿ ಶ್ರೀನಗರ ವಿದ್ಯಾರ್ಥಿಗಳ ವಿರುದ್ಧದ ಲಾಠಿ ಚಾರ್ಜ್ ಅನ್ನು ತೀವ್ರವಾಗಿ ಖಂಡಿಸುತ್ತೇನೆ. ವಿದ್ಯಾರ್ಥಿಗಳ ವಿರುದ್ಧ ಪೋಲಿಸ್ ಪಡೆಗಳನ್ನು ಬಳಸುವುದು ಎಂದಿಗೂ ತೊಂದರೆಯನ್ನು ನಿವಾರಿಸುವುದಿಲ್ಲ ಎಂದು ಬಿಜೆಪಿ ಮತ್ತು ಮೈತ್ರಿ ಪಕ್ಷಗಳಿಗೆ ಯಾವಾಗ ತಿಳಿಯುತ್ತದೋ?" ಎಂದು ಕೂಡ ಅವರು ಹೇಳಿದ್ದಾರೆ.

ಭಾರತ ಮತ್ತು ವೆಸ್ಟ್ ಇಂಡಿಸ್ ನಡುವಿನ ಟಿ೨೦ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತ ಸೋತಿದ್ದನ್ನು ಸಂಭ್ರಮಿಸಿದ ಕೆಲವು ಕಾಶ್ಮೀರಿ ವಿದ್ಯಾರ್ಥಿಗಳು ಮತ್ತು ಅನ್ಯ ಕಾಶ್ಮೀರಿ ವಿದ್ಯಾರ್ಥಿಗಳ ನಡುವ ಘರ್ಷಣೆ ಉಂಟಾಗಿ, ಕಾಲೇಜು ಆವರಣದಲ್ಲಿ ಉದ್ವಿಘ್ನತೆ ಉಂಟಾಗಿತ್ತು.

ಮಂಗಳವಾರ ರಾತ್ರಿಯಿಂದಲೂ ಕಾಲೇಜು ಆವರಣದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಬೀಡು ಬಿಟ್ಟಿದ್ದು, ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವಾಲಯ ಕೂಡ ತನಿಖೆಗಾಗಿ ತಂಡವೊಂದನ್ನು ಕಳುಹಿಸಿದೆ.

SCROLL FOR NEXT