ಕಾಣೆಯಾದ ಹೋರಿಯ ಬಗ್ಗೆ ಪ್ರಕಟಣೆ 
ಪ್ರಧಾನ ಸುದ್ದಿ

ಹೋರಿ ಹುಡುಕಿಕೊಟ್ಟವರಿಗೆ ೫೦ ಸಾವಿರ ರೂ ಬಹುಮಾನ ಘೋಷಿಸಿದ ವಾರಣಾಸಿ ವ್ಯಕ್ತಿ

ಕಳೆದುಹೋಗಿರುವ 'ಬಾದಶಾಃ' ಇರಬಹುದಾದ ಜಾಗದ ಸುಳಿವು ನೀಡಿದವರಿಗೆ, ಹುಡುಕಿಕೊಟ್ಟವರಿಗೆ ೫೦೦೦೦ ರೂ ಬಹುಮಾನ ನೀಡುವುದಾಗಿ ವಾರಣಾಸಿಯ ಸಾರನಾಥದೆಲ್ಲೆಡೆ

ವಾರಣಾಸಿ: ಕಳೆದುಹೋಗಿರುವ 'ಬಾದಶಾಃ' ಇರಬಹುದಾದ ಜಾಗದ ಸುಳಿವು ನೀಡಿದವರಿಗೆ, ಹುಡುಕಿಕೊಟ್ಟವರಿಗೆ ೫೦೦೦೦ ರೂ ಬಹುಮಾನ ನೀಡುವುದಾಗಿ ವಾರಣಾಸಿಯ ಸಾರನಾಥದೆಲ್ಲೆಡೆ ಭಿತ್ತಿಚಿತ್ರಗಳು ರಾರಾಜಿಸುತ್ತಿವೆ.

'ಬಾದಶಾಃ' ಯಾವುದೋ ಒಂದು ಪ್ರಾಣಿಯಲ್ಲ ಬದಲಾಗಿ ಕೆಲವು ದಿನಗಳಿಂದ ಕಾಣೆಯಾಗಿರುವ ಮೂರು ವರ್ಷದ ಸಾಕಿದ-ಪ್ರೀತಿಯ ಹೋರಿ! ಇದು ಪೋಲಿಸ್ ಠಾಣೆಯ ಮೆಟ್ಟಿಲು ಕೂಡ ಏರಿದ್ದು, ಮಾಲೀಕ ಮನೋಜ್ ಕುಮಾರ್ ಕಾಣೆಯಾದ ಹೋರಿಯ ಬಗೆಗೆ ಸಾರನಾಥ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೋರಿಯ ದೈಹಿಕ ಗುಣಗಳು, ಆಕಾರ, ಬಣ್ಣದ ವಿವರಗಳುಳ್ಳ ಪೋಸ್ಟರ್ ಗಳನ್ನು ಗ್ರಾಮದ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಕಲಾಗಿದೆ. 'ಬಾದಶಾಃ' ತಮ್ಮ ಕುಟುಂಬದ ಸದಸ್ಯನಾಗಿದ್ದು, ಅವನಿಗೆ ಮನೆಯಲ್ಲಿ ಸ್ವತಂತ್ರವಾಗಿ ಓಡಾಡುವ ಅವಕಾಶವಿತ್ತು ಎಂದು ಕೂಡ ಮನೋಜ್ ಹೇಳಿದ್ದಾರೆ.

"ಅದು ಯಾರಿಗೂ ತೊಂದರೆ ನೀಡದೆ ಈ ಪ್ರದೇಶದಲ್ಲೆಲ್ಲಾ ಸುತ್ತಾಡುತ್ತಿತ್ತು" ಎಂದು ಕೂಡ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ: ಓರ್ವ ಭಾರತೀಯ ಸೇರಿ 12 ಮಂದಿ ಸಾವು..!

ಗೋವಾ ಆಗಸದಲ್ಲಿ ತಪ್ಪಿದ ದೊಡ್ಡ ಅನಾಹುತ: ಹಠಾತ್ ಎಂಜಿನ್ ಆಫ್; ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ!

ಬೆಂಗಳೂರಿನಲ್ಲಿ ಚಿಕನ್ ಅಂಗಡಿಗಳು ಬಂದ್? ಈ ಎರಡು ದಿನ ನಗರದಲ್ಲಿ ನಾನ್‌ವೆಜ್ ಸಿಗೋದು ಡೌಟ್! ಯಾಕೆ ಗೊತ್ತಾ?

ನೇಪಾಳ ಜಲಪ್ರಳಯ: 7ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ; ಸಾವಿನ ಸಂಖ್ಯೆ 1,003ಕ್ಕೆ ಏರಿಕೆ, ಇನ್ನೂ ಸಿಗದ 3,916 ಜನರ ಸುಳಿವು..!

‘ದೇಶ ಸಂತಸದಿಂದ ತುಂಬಿದೆ, ಆದರೆ ಕೆಲವರು ಸುಳ್ಳು ಹೇಳಿ ಜನರಲ್ಲಿ ನಿರಾಶೆ ಮೂಡಿಸಲು ಯತ್ನಿಸುತ್ತಿದ್ದಾರೆ': ವಿಡಿಯೊ ಮೂಲಕ ಪ್ರಧಾನಿ ಮೋದಿ ಹೇಳಿದ್ದೇನು? ; Video