ಅಮೆರಿಕದ ಪ್ರಮುಖ ಆಡಳಿತಾತ್ಮಕ ಹುದ್ದೆಗೆ ಮಾಸ್ಟರ್ ಕಾರ್ಡ್ ಸಿಇಒ ಅಜಯ್ ಬಂಗಾ ನೇಮಕ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತೀಯ ಮೂಲದ ವ್ಯಕ್ತಿಗಳಿಗೆ ತಮ್ಮ ಆಡಳಿತದಲ್ಲಿ ಮಹತ್ವದ ಹುದ್ದೆಗಳನ್ನು ನೀಡುತ್ತ ಬಂದಿದ್ದು,...
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತೀಯ ಮೂಲದ ವ್ಯಕ್ತಿಗಳಿಗೆ ತಮ್ಮ ಆಡಳಿತದಲ್ಲಿ ಮಹತ್ವದ ಹುದ್ದೆಗಳನ್ನು ನೀಡುತ್ತ ಬಂದಿದ್ದು, ಇದೀಗ ಮತ್ತೊಬ್ಬ ಭಾರತೀಯನನ್ನು ಪ್ರಮುಖ ಹುದ್ದೆಗೆ ನೇಮಕ ಮಾಡಿದ್ದಾರೆ.
ಮಾಸ್ಟರ್ ಕಾರ್ಡ್ ಸಂಸ್ಥೆಯ ಸಿಇಒ ಹಾಗೂ ಅಧ್ಯಕ್ಷರಾಗಿರುವ ಅಜಯ್ ಬಂಗಾ ಅವರನ್ನು ಅಮೆರಿಕದ ರಾಷ್ಟ್ರೀಯ ಸೈಬರ ಭದ್ರತೆ ಹೆಚ್ಚಳ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಈ ಆಯೋಗ ಒಂಬತ್ತು ಸದಸ್ಯರನ್ನು ಒಳಗೊಂಡಿದ್ದು, ಅದರಲ್ಲಿ ಬಂಗಾ ಸಹ ಒಬ್ಬರಾಗಿದ್ದಾರೆ.
ಐಐಎಂ ಅಹಮದಾಬಾದ್ನಲ್ಲಿ ಎಂಬಿಎ ಪದವಿ ಪಡೆದಿರುವ ಬಂಗಾ ವಿವಿಧ ಕಂಪನಿಗಳಲ್ಲಿ ಮಹತ್ವದ ಹುದ್ದೆ ನಿರ್ವಹಿಸಿದ್ದಾರೆ.
1981ರಿಂದ 1994ರ ವರೆಗೆ ನೆಸ್ಲೆ ಇಂಡಿಯಾ ಕಂಪನಿಯ ಮಾರಾಟ ಹಾಗೂ ನಿರ್ವಹಣೆ ವಿಭಾಗದಲ್ಲಿ ಕೆಲಸ ಮಾಡಿದ್ದ ಅವರು, ಬಳಿಕ ಪೆಪ್ಸಿ ಕೊ ರೆಸ್ಟೊರಂಟ್ ಇಂಟರ್ನ್ಯಾಷನಲ್ ಇಂಡಿಯಾದ ವ್ಯಾಪಾರ ವಿಭಾಗದ ನಿರ್ದೇಶಕರಾಗಿ ಆಯ್ಕೆಯಾದರು. 1996ರಲ್ಲಿ ಸಿಟಿಗ್ರೂಪ್ಗೆ ಸೇರಿದ ಬಂಗಾ, ಏಷ್ಯಾ ಪೆಸಿಫಿಕ್ ಸಿಇಒ ಆಗಿ ಬಡ್ತಿ ಪಡೆದರು. 2009ರಲ್ಲಿ ಮಾಸ್ಟರ್ಕಾರ್ಡ್ ಸಿಇಒ ಆಗಿ ಅಧಿಕಾರ ಸ್ವೀಕರಿಸಿದರು. ಅಜಯ್ ಬಂಗಾ ಅವರ ಆಡಳಿತ ಚತುರತೆ ಹಾಗೂ ಪರಿಣತಿಯಿಂದಾಗಿ ಅಮೆರಿಕ ಸರ್ಕಾರ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲಿದೆ ಎಂದು ಬರಾಕ್ ಒಬಾಮ ಅಭಿಪ್ರಾಯಪಟ್ಟಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.