ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಮೊಬೈಲ್ ಕಳವು ಜಾಲ ಬೇಧಿಸಿದ ದೆಹಲಿ ಪೊಲೀಸರು; ಎಂಟು ಜನರ ಬಂಧನ

ವಿವಿಧ ರಾಜ್ಯಗಳಲ್ಲಿ ಮೊಬೈಲ್ ಕಳವು ಮಾಡಿ ಅವುಗಳ ಭಾಗಗಳನ್ನು ಚೈನಾ ಮತ್ತು ನೇಪಾಳದಲ್ಲಿ ಮಾರಾಟ ಮಾಡುತ್ತಿದ್ದ ಎಂಟು ಜನರ ಗ್ಯಾಂಗ್ ಅನ್ನು ಬೇಧಿಸಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಮೊಬೈಲ್ ಕಳವು ಮಾಡಿ ಅವುಗಳ ಭಾಗಗಳನ್ನು ಚೈನಾ ಮತ್ತು ನೇಪಾಳದಲ್ಲಿ ಮಾರಾಟ ಮಾಡುತ್ತಿದ್ದ ಎಂಟು ಜನರ ಗ್ಯಾಂಗ್ ಅನ್ನು ಬೇಧಿಸಿ ಬಂಧಿಸುವಲ್ಲಿ ದೆಹಲಿ ಪೊಲೀಸರು ಮಂಗಳವಾರ ಯಶಸ್ವಿಯಾಗಿದ್ದು, ೪೪೮ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ವಶ ಪಡಿಸಿಕೊಂಡಿರುವ ಫೋನುಗಳಲ್ಲಿ ೨.೫ ಕೋಟಿ ಬೆಲೆಬಾಳುವ ೩೧೦ ಐಫೋನ್ ಗಳು ಕೂಡ ಸೇರಿವೆ.

"ಈ ಗ್ಯಾಂಗ್ ಕದ್ದ ಮೊಬೈಲ್ ನ ಭಾಗಗಳನ್ನು ಚೈನಾ, ನೇಪಾಳ ಮತ್ತಿತರ ದೇಶಗಳಿಗೆ ಕೊರಿಯರ್ ಮೂಲಕ ಮಾರಾಟ ಮಾಡುತ್ತಿತ್ತು" ಎಂದು ಪೊಲೀಸ್ ಉಪನಿರ್ದೇಶಕ ಮಧುರ ವರ್ಮಾ ಹೇಳಿದ್ದಾರೆ.

ಬಂಧನರಾದವರು ವಿಕ್ಕಿ, ನಿತಿನ್ ಕುಮಾರ್, ಪವನ್ ಸಿಂಗ್, ತರುಣ್ ಕುಮಾರ್, ರಾಜೀವ್ ಕುಮಾರ್ (ಮೂಲ ಹೆಸರನ್ನು ಬದಲಿಸಲಾಗಿದೆ), ಮೋಹಿತ್ ಬಾತ್ರಾ, ರೋಹನ್ ಮತ್ತು ತರಣದೀಪ್ ಸಿಂಗ್ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದವಾರ ನಡೆದ ಮೂರು ದಿನಗಳ ಕಾರ್ಯಾಚರಣೆಯಲ್ಲಿ ಈ ಆರೋಪಿಗಳನ್ನು ಬಂಧಿಸಲಾಗಿದೆ. "ಈ ಕಾರ್ಯಾಚರಣೆ ಇನ್ನೂ ಜಾರಿಯಲ್ಲಿದ್ದು ಹೆಚ್ಚಿನ ದಾಳಿಗಳನ್ನು ಯೋಜಿಸಿದ್ದೇವೆ" ಎಂದು ಪೊಲೀಸರು ತಿಳಿಸಿದ್ದಾರೆ.

"ತರುಣ್ ಕದ್ದ ಮೊಬೈಲ್ ಫೋನುಗಳನ್ನು ದೆಹಲಿಯ ಗಫರ್ ಮಾರುಕಟ್ಟೆಗೆ ತಲುಪಿಸುತ್ತಿದ್ದ ಮತ್ತು ರೋಹನ್ ಇವುಗಳನ್ನು ಪಡೆಯುತ್ತಿದ್ದ. ಗಫರ್ ಮಾರುಕಟ್ಟೆಯಲ್ಲಿ ಮಾರಾಟ ಮಳಿಗೆ ಹೊಂದಿರುವ ಮೋಹಿತ್ ಮತ್ತು ತರಣದೀಪ್ ಪಕ್ಕದ ದೇಶದಲ್ಲಿ ಮಾರಾಟ ಮಾಡುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು" ಎಂದು ಪೊಲೀಸರು ತಿಳಿಸಿದ್ದಾರೆ.

"ದೇಶದಾದ್ಯಂತ ಈ ಗ್ಯಾಂಗ್ ಮೊಬೈಲ್ ಫೋನ್ ಗಳನ್ನು ಕದಿಯುತ್ತಿತ್ತು ಹಾಗೂ ಮೋಹಿತ್ ಮತ್ತು ತರಣದೀಪ್ ಈ ಕದ್ದ ಮೊಬೈಲ್ ಗಳನ್ನು ನೇಪಾಳಕ್ಕೆ ತಲುಪಿಸಲು ಆಗಾಗ್ಗೆ ಆ ದೇಶಕ್ಕೆ ಭೇಟಿ ನೀಡುತ್ತಿದ್ದರು" ಎಂದು ಕೂಡ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು