ಪ್ರಧಾನ ಸುದ್ದಿ

ಕರುಣಾನಿಧಿ ವಿರುದ್ಧ ವೈಯಕ್ತಿಕ ದಾಳಿ, ಚುನಾವಣಾ ಆಯೋಗದಿಂದ ವೈಕೋಗೆ ನೋಟಿಸ್

Lingaraj Badiger
ಚೆನ್ನೈ: ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ ಆರೋಪದ ಮೇಲೆ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಅವರಿಗೆ ಬುಧವಾರ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಇಂದು 3 ಗಂಟೆಯೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ಏಪ್ರಿಲ್ 18ರಂದೇ ಮುಖ್ಯ ಚುನಾವಣಾ ಅಧಿಕಾರಿ ರಾಜೇಶ್ ಲಖೋನಿ ಅವರು ವೈಕೋ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ಕಳೆದ ಏಪ್ರಿಲ್ 6ರಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ವೈಕೋ, ಕರುಣಾನಿಧಿ ಅವರು ರಾಜಕೀಯ ಮಾಡುವ ಬದಲು ಸೆಕ್ಸ್ ವರ್ಕ್ ನಲ್ಲಿ ಬ್ಯುಸಿಯಾಗಲಿ ಎಂದು ವಾಗ್ದಾಳಿ ನಡೆಸಿದ್ದರು, ಇದಕ್ಕೆ ಮಿತ್ರ ಪಕ್ಷಗಳು ಸೇರಿದಂತೆ ಹಲವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ನಂತರ ವೈಕೋ ಅವರು ಕರುಣಾನಿಧಿ ಅವರ ಬಳಿ ಬೇಷರತ್ತು ಕ್ಷಮೆಯಾಚಿಸಿದ್ದರು.
ಡಿಎಂಕೆಯಿಂದ ಹೊರಬಂದು ಎಂಡಿಎಂಕೆ ಪಕ್ಷ ಕಟ್ಟಿದ ವೈಕೋ ಅವರು 20 ವರ್ಷಗಳ ನಂತರ ಇದೇ ಮೊದಲ ಬಾರಿಗೆ ತಮಿಳುನಾಡು ವಿಧಾನಸಭೆ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ.
SCROLL FOR NEXT