ಅತ್ತರಿ: ಪಾಕಿಸ್ತಾನ ಕೋಟ್ ಲಖಪತ್ ಜೈಲಿನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಭಾರತದ ಕಿರ್ಪಾಲ್ ಸಿಂಗ್ ಅವರ ಮೃತದೇಹವನ್ನು ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ದೇಹದಲ್ಲಿ ಹೃದಯ ಮತ್ತು ಹೊಟ್ಟೆ ಭಾಗವೇ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಕಿರ್ಪಾಲ್ ಸಿಂಗ್ ಮೃತದೇಹವನ್ನು ಭಾರತದ ಅಧಿಕಾರಿಗಳಿಗೆ ಪಾಕಿಸ್ತಾನ ಹಸ್ತಾಂತರಿಸಿತು. ಮೃತದೇಹವನ್ನು ಭಾರತದ ವೈದ್ಯರು ಪರೀಕ್ಷೆ ನಡೆಸಿದಾಗ ಹೃದಯ ಮತ್ತು ಹೊಟ್ಟೆ ಭಾಗವನ್ನು ಇಲ್ಲದಿರುವುದು ತಿಳಿದು ಬಂದಿದೆ. ಅದು ಬಿಟ್ಟರೆ ದೇಹದಲ್ಲಿ ಯಾವುದೇ ಗಾಯಗಳ ಗುರುತುಗಳು ಪತ್ತೆಯಾಗಿಲ್ಲ ಎಂದು ವೈದ್ಯ ಬಿಎಸ್ ಬಾಲ್ ತಿಳಿಸಿದ್ದಾರೆ.
ಕಿರ್ಪಾಲ್ ಸಿಂಗ್ ನ ಕಿಡ್ನಿ ಮತ್ತು ಲಿವರ್ ಗಳನ್ನು ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿ ಹೆಚ್ಚಿನ ಮಟ್ಟಿಗೆ ಪರೀಕ್ಷೆ ನಡೆಸಿ, ಸಾವಿಗೆ ಏನು ಕಾರಣ ಎಂಬುದನ್ನು ಪತ್ತೆಹಚ್ಚಲಾಗುತ್ತದೆ.
ಮನುಷ್ಯನು ಯಾವ ರೀತಿ ಮೃತಪಟ್ಟಿದ್ದಾನೆ ಎಂದು ಕಿಡ್ನಿ ಮತ್ತು ಲೀವರ್ ಪರೀಕ್ಷೆ ನಡೆಸಿದರೆ ತಿಳಿದ ಬರುತ್ತದೆ. ಆದರೆ, ಪಾಕಿಸ್ತಾನದವರು ಕಿರ್ಪಾಲ್ ಸಿಂಗ್ ದೇಹದಿಂದ ಅವರೆಡನ್ನು ತೆಗೆದುಕೊಂಡಿಲ್ಲ ಎಂದ ಅವರು, ಪಾಕಿಸ್ತಾನ ಇನ್ನು ಮರಣೋತ್ತರ ಪರೀಕ್ಷೆ ವರದಿ ಕಳುಹಿಸಿಲ್ಲ ಎಂದು ತಿಳಿಸಿದ್ದಾರೆ.
ವಾಘಾ ಗಡಿಯ ಮೂಲಕ 1992ರಲ್ಲಿ ಪಾಕಿಸ್ತಾನ ಪ್ರವೇಶ ಮಾಡಿದ ಕಿರ್ಪಾಲ್ ಸಿಂಗ್ ಅವರನ್ನು ಗೂಢಚರ್ಯೆ ಆರೋಪದಲ್ಲಿ ಪಾಕ್ ಭದ್ರತಾ ಪಡೆ ಬಂಧಿಸಿತ್ತು. ಪಾಕಿಸ್ತಾನ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಸಿಂಗ್ ಅವರು ಕಳೆದ 25 ವರ್ಷಗಳಿಂದ ಜೈಲಿನಲ್ಲಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos