ನವದೆಹಲಿ: ಭಾರತದಲ್ಲಿ ಬುಲೆಟ್ ರೈಲಿನ ಆಗಮನಕ್ಕಾಗಿ ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದೇವೆ. ಭಾರತದ ಈ ನೂತನ ಬುಲೆಟ್ ರೈಲು ಜಪಾನ್ ಇಂಟರ್‌ನ್ಯಾಷನಲ್ ಕಾರ್ಪರೇಷನ್ ಏಜೆನ್ಸಿಯ ಯೋಜನೆಯಲ್ಲಿ ತಯಾರಾಗಲಿದ್ದು, ಪ್ರಸ್ತುತ ಏಜೆನ್ಸಿ ಹೊಸ ರೈಲಿನ ಸಾಮರ್ಥ್ಯ ಹೇಗಿರುತ್ತದೆ ಎಂಬುದನ್ನು ಬಹಿರಂಗಪಡಿಸಿದೆ.
ಮುಂಬೈಯಿಂದ ಅಹ್ಮದಾಬಾದ್ ವರೆಗೆ 315 ಮೈಲುಗಳಷ್ಟು ಸಂಚರಿಸಲಿರುವ ಈ ರೈಲು ಥಾಣೆಯಿಂದ ವಿರಾರ್‌ಗೆ ಸಾಗುವ ನದಿಯ ಖಾರಿಯಲ್ಲಿ 13 ಮೈಲುಗಳಷ್ಟು ದೂರವನ್ನು ಜಲಾಂತರ್ಗಾಮಿಯಾಗಿ ಕ್ರಮಿಸಲಿದೆ.
ಅತೀ ವೇಗದ ರೈಲು ಎಂದೇ ಹೇಳಲ್ಪಡುವ ದುರಂತೋ ಎಕ್ಸ್‌ಪ್ರೆಸ್ ಮುಂಬೈಯಿಂದ ಅಹ್ಮದಾಬಾದ್‌ಗೆ ತಲುಪಲು 7 ಗಂಟೆಗೆ ತೆಗೆದುಕೊಳ್ಳುತ್ತಿದೆ. ಅದೇ ವೇಳೆ ಗಂಟೆಗೆ 217 ಮೀ ಸಂಚರಿಸಬಲ್ಲ ನೂತನ ಬುಲೆಟ್ ರೈಲು ಮುಂಬೈಯಿಂದ ಅಹ್ಮದಾಬಾದ್‌ಗೆ ಎರಡು ಗಂಟೆಗಳಲ್ಲಿ ತಲುಪಲಿದೆ.
2018ರ ಅಂತ್ಯಕ್ಕೆ ಈ ಬುಲೆಟ್ ರೈಲಿನ ಯೋಜನೆ ಆರಂಭವಾಗಲಿದೆ.
ಟೋಕಿಯೋ ದಿಂದ ಹಕೋಡಾಟೆ ನಡುವೆ ಸಂಚರಿಸುವ ಜಪಾನ್‌ನ ಬುಲೆಟ್ ರೈಲು (ಶಿಂಕಾನ್‌ಸೆನ್)ನಂತೆಯೇ ಭಾರತದ ಹೊಸ ಬುಲೆಟ್ ರೈಲು ಕಾರ್ಯವೆಸಗಲಿದೆ ಎಂದು ಜಪಾನ್ ಟೈಮ್ಸ್ ಮಾಧ್ಯಮ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics