ಪ್ರಧಾನ ಸುದ್ದಿ

ಜನ 'ಅಚ್ಛೆ ದಿನ'ಗಳಿಗಾಗಿ ಇನ್ನೂ ಕಾಯುತ್ತಿದ್ದಾರೆ: ಅಖಿಲೇಶ್ ಯಾದವ್

Guruprasad Narayana

ಅಲಹಾಬಾದ್: ಬಿಜೆಪಿ ಮುಂದಾಳತ್ವದ ಎನ್ ಡಿ ಎ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಎರಡು ವರ್ಷಗಳ ಹಿಂದೆ ಲೋಕಸಭಾ ಚುನಾವಣೆಗಳಲ್ಲಿ ವಚನ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ 'ಅಚ್ಛೆ ದಿನ'ಗಳಿಗಾಗಿ (ಒಳ್ಳೆಯ ದಿನಗಳು) ಜನ ಇನ್ನು ಕಾಯುತ್ತಲೇ ಇದ್ದಾರೆ ಎಂದು ಕುಹಕವಾಡಿದ್ದಾರೆ.

"ಉತ್ತರ ಪ್ರದೇಶದ ಜನ ಎಚ್ಚರಿಕೆಯಿಂದಿರಬೇಕು. ಸಮಾಜವಾದಿ ಪಕ್ಷದ ಜನಪ್ರಿಯತೆಯ ಬಗ್ಗೆ ಕಳವಳಗೊಂಡಿರುವ ಬಿಜೆಪಿ ಮತ್ತು ಬಿ ಎಸ್ ಪಿ ಪಕ್ಷಗಳು ನಮ್ಮ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿ ನಿಮ್ಮಲ್ಲಿಗೆ ಬರಲಿದ್ದಾರೆ.

"ಈ ಸರ್ಕಾರದ ಆಡಳಿತದಲ್ಲಿ ರಾಜ್ಯ ಕಂಡಿರುವ ಅತ್ಯುತ್ತಮ ಅಭಿವೃದ್ಧಿಯ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿರಲಿ, ವಿರೋಧ ಪಕ್ಷಗಳಿಂದ ಮೋಸ ಹೋಗಬೇಡಿ" ಎಂದು ಯಾದವ್ ಹೇಳಿದ್ದಾರೆ.

ಅವರು ಯಮುನಾ ಪ್ರದೇಶದ ದಂಡಾಪುರ್ ಗ್ರಾಮದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಇದೇ ಸಮಯದಲ್ಲಿ ೨೦೦ ಕೋಟಿ ಮೊತ್ತದ ಹೊಸ ಯೋಜನೆಗಳಿಗೂ ಚಾಲನೆ ನೀಡಿದ್ದಾರೆ.

"ಬಿಜೆಪಿ ಪ್ರಚಾರದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದಿರಲು ನಾನು ನಿಮಗೆ ಕೇಳಿಕೊಳ್ಳುತ್ತೇನೆ. ೨೦೧೪ ರಲ್ಲಿ ಅಚ್ಛೆ ದಿನ ಘೋಷಣೆಯಿಂದ ನಮ್ಮ ರಾಜ್ಯದಿಂದ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡರು.

"ಈಗ ಅಚ್ಛೆ ದಿನಗಳು ಎಲ್ಲಿ ಎಂದು ಕೇಳುವ ಸಮಯ ಬಂದಿದೆ" ಎಂದು ಕೂಡ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

SCROLL FOR NEXT