ನಿರ್ಗಮಿತ ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ 
ಪ್ರಧಾನ ಸುದ್ದಿ

ಒಂದು ದಿನದ ಆಡಳಿತದಲ್ಲಿ ರಾವತ್ ತೆಗೆದುಕೊಂಡ ಸಂಪುಟ ಸಭೆ ನಿರ್ಣಯಗಳು ಅಮಾನ್ಯ

ಉತ್ತರಾಖಂಡ್ ಹೈಕೋರ್ಟ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ರದ್ದುಪಡಿಸಿ ನೀಡಿದ್ದ ಆದೇಶದ ನಂತರ ಮತ್ತು ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಹಿಡಿದ ಸಮಯದ ಒಂದು ದಿನದ

ಡೆಹ್ರಾಡೂನ್: ಉತ್ತರಾಖಂಡ್ ಹೈಕೋರ್ಟ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ರದ್ದುಪಡಿಸಿ ನೀಡಿದ್ದ ಆದೇಶದ ನಂತರ ಮತ್ತು ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಹಿಡಿದ ಸಮಯದ ಒಂದು ದಿನದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಹರೀಶ್ ರಾವತ್ ತೆಗೆದುಕೊಂಡಿರುವ ಸಂಪುಟ ಸಭೆ ನಿರ್ಣಯಗಳಿಗೆ ಮಾನ್ಯತೆಯಿಲ್ಲ ಎಂದು ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.

ರಾವತ್ ಮತ್ತೆ ಅಧಿಕಾರ ಸ್ವೀಕರಿಸದ ತಕ್ಷಣ ಎರಡು ಸಂಪುಟ ಸಭೆ ಕರೆದು, ಏಪ್ರಿಲ್ ೨೧ ರ ರಾತ್ರಿ ಮತ್ತು ಏಪ್ರಿಲ್ ೨೨ರಂದು ಬೆಳಗ್ಗೆ ಸುಮಾರು ೧೮ ಉನ್ನತ ಮಟ್ಟದ ನಿರ್ಣಯಗಳನ್ನು ಕೈಗೊಂಡಿದ್ದರು ಮತ್ತು ಅವುಗಳನ್ನು ಆದ್ಯತೆ ಮೇರೆ ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಈ ನಿರ್ಣಯಗಳಲ್ಲಿ ಕೆಲವು ಅಕಾಲಿಕ ಶಿಕ್ಷಕರನ್ನು ಮತ್ತಿತರ ಸಿಬ್ಬಂದಿಗಳನ್ನು ಖಾಯಂ ನೇಮಕಗೊಳಿಸುವುದೂ ಸೇರಿದ್ದವು.

ಸುಪ್ರೀಮ್ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದ್ದರಿಂದ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಮರುಕಳಿಸಿದ್ದು, ಹೈಕೋರ್ಟ್ ಆದೇಶದಂತೆ ರಾವತ್ ಮತ್ತೆ ಖುರ್ಚಿಗೆ ತೆರಳಿದ್ದು ಕೂಡ ಮಾನ್ಯತೆ ಕಳೆದುಕೊಂಡಿದೆ ಆದುದರಿಂದ ಅವರ ಒಂದು ದಿನದ ಆಡಳಿತದ ನಿರ್ಧಾರಗಳಿಗೂ ಮಾನ್ಯತೆಯಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!