ನವದೆಹಲಿ: ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ. ಅದೇನೆಂದರೆ ವಿವಿಧ ಇಲಾಖೆಗಳಲ್ಲಿ ಸರಿ ಸುಮಾರು 2 ಲಕ್ಷಕ್ಕಿಂತಲೂ ಹೆಚ್ಚು ಉದ್ಯೋಗ ಅವಕಾಶಗಳನ್ನು ಕೇಂದ್ರ ಸರ್ಕಾರ ಸೃಷ್ಟಿಸಲಿದೆ!
ಕೇಂದ್ರ ಸರ್ಕಾರದ ಪ್ರಕಾರ 2016-17 ರಲ್ಲಿ 2.18 ಲಕ್ಷ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. 2017ರ ವೇಳೆಗೆ 5, 635 ಹೊಸ ಹುದ್ದೆಗಳು ಗೃಹ ಸಚಿವಾಲಯದಲ್ಲಿ ಸೃಷ್ಟಿಯಾಗಲಿದ್ದು ಅಲ್ಲಿ 22,006 ಹುದ್ದೆಗಳಿರಲಿವೆ. ಅಷ್ಟೇ ಅಲ್ಲದೆ ಪೊಲೀಸ್ ಇಲಾಖೆಯಲ್ಲಿ 47, 264 ಹೊಸ ಹುದ್ದೆಗಳನ್ನು ಸೇರ್ಪಡೆ ಮಾಡುವ ಮೂಲಕ ಹುದ್ದೆಗಳ ಸಂಖ್ಯೆ 10,75, 341 ಏರಿಕೆಯಾಗಲಿದೆ.
2015ರಲ್ಲಿ ಭದ್ರತಾ ಇಲಾಖೆಯಲ್ಲಿ ಉದ್ಯೋಗಿಗಳ ಸಂಖ್ಯೆ 10,894 ಆಗಿತ್ತು. ಇದನ್ನು 2017ರ ಹೊತ್ತಿಗೆ 51,084 ಮಾಡಲು ಸರ್ಕಾರ ಕಾರ್ಯ ರೂಪಿಸಿದೆ ಎಂದು ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಅಂದಾಜಿನಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರ ಭಾವೀ ಕಾರ್ಯಗಳ ಬಗ್ಗೆ ಸೂಕ್ತ ಚಿಂತನೆ ನಡೆಸಿದ ನಂತರವೇ ಈ ಯೋಜನೆಯನ್ನು ಕೈಗೊಂಡಿದೆ ಎಂದು ಕೇಂದ್ರ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಅಗತ್ಯ ಬಂದರೆ ಸರ್ಕಾರ ಹೊಸ ಹುದ್ದೆಗಳನ್ನು ಸೃಷ್ಟಿಸಲಿದೆ. ಉತ್ತಮ ಆಡಳಿತ ನಿರ್ವಹಿಸುವುದಕ್ಕಾಗಿ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಸುದ್ದಿ ಮಾಧ್ಯಮದಲ್ಲಿ ಮಾತನಾಡಿದ ಸಿಂಗ್ ಹೇಳಿದ್ದಾರೆ.
ನಾಗರಿಕ ವಿಮಾನ ಯಾನ ಸಚಿವಾಲಯದಲ್ಲಿ 2017ರ ವೇಳೆಗೆ 1,080ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಿ ಉದ್ಯೋಗಿಗಳ ಸಂಖ್ಯೆಯನ್ನು 2,140 ರಷ್ಟು ಮಾಡಲಾಗುವುದು. ಅದೇ ವೇಳೆ ಅಣು ಶಕ್ತಿ ಇಲಾಖೆಯಲ್ಲಿ 6,353 ಹೊಸ ಉದ್ಯೋಗಗಳನ್ನು ಮತ್ತು ವಿದೇಶಾಂಗ ಸಚಿವಾಲಯದಲ್ಲಿ 2,072 ಹುದ್ದೆಗಳನ್ನು ಸೃಷ್ಟಿಸಲಾಗುವುದು.
ಗಣಿಗಾರಿಕೆ ಸಚಿವಾಲಯದಲ್ಲಿ 4399 ಹೊಸ ಹುದ್ದೆಗಳ ಜತೆಗೆ ಆಂತರಿಕ ಸಚಿವಾಲಯದಲ್ಲಿ 1, 796 ಹೊಸ ಹುದ್ದೆಗಳ ಸೃಷ್ಟಿಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics