20 ಕೋಟಿ ಮೌಲ್ಯದ 'ಮಿಯಾವ್ ಮಿಯಾವ್' ಡ್ರಗ್ ವಶ; 8 ಜನರನ್ನು ಬಂಧಿಸಿದ ದೆಹಲಿ ಪೊಲೀಸರು
20 ಕೋಟಿ ಮೌಲ್ಯದ ಔತಣಕೂಟಗಳ ಡ್ರಗ್ ಎಂದೇ ಹೆಸರಾದ ನಿಷೇಧಿತ ಮಿಫೆಡ್ರಾನ್ ಅಥವಾ 'ಮಿಯಾವ್ ಮಿಯಾವ್' ಡ್ರಗ್ ಅನ್ನು ದೆಹಲಿ ವಿಶೇಷ ಪೊಲೀಸ್ ದಳ ವಶಪಡಿಸಿಕೊಂಡಿದ್ದು,
ನವದೆಹಲಿ: 20 ಕೋಟಿ ಮೌಲ್ಯದ ಔತಣಕೂಟಗಳ ಡ್ರಗ್ ಎಂದೇ ಹೆಸರಾದ ನಿಷೇಧಿತ ಮಿಫೆಡ್ರಾನ್ ಅಥವಾ 'ಮಿಯಾವ್ ಮಿಯಾವ್' ಡ್ರಗ್ ಅನ್ನು ದೆಹಲಿ ವಿಶೇಷ ಪೊಲೀಸ್ ದಳ ವಶಪಡಿಸಿಕೊಂಡಿದ್ದು, 8 ಜನರನ್ನು ಬಂಧಿಸಿದೆ.
ಗ್ರೇಟರ್ ಕೈಲಾಶ್ ನ ಪ್ರದೇಶವೊಂದರಲ್ಲಿ ಪೊಲೀಸರು ಈ ಡ್ರಗ್ ವಶಪಡಿಸಿಕೊಂಡಿದ್ದು, ನಂತರ ಚಿತ್ತರಂಜನ್ ಪಾರ್ಕ್ ನಲ್ಲಿ ಸುರಿಂದರ್ ಸಿಂಗ್ ಎಂಬುವವರನ್ನು ಬಂಧಿಸಿದ್ದಾರೆ.
ದೆಹಲಿ ಮತ್ತು ಮುಂಬೈನಲ್ಲಿ ಯುವಕರಿಗೆ ಈ ಡ್ರಗ್ ಸರಬರಾಜು ಮಾಡುತ್ತಿದ್ದ ಜಾಲವನ್ನು ಕೂಡ ಪೊಲೀಸರು ಪತ್ತೆ ಹಚ್ಚಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡ್ರಗ್ ಬಳಕೆದಾರರರಲ್ಲಿ 'ಮಿಯಾವ್-ಮಿಯಾವ್' ಅಥವಾ 'ಎಂ-ಕ್ಯಾಟ್' ಬಹಳ ಜನಪ್ರಿಯವಾಗಿದೆ.
ಕಳೆದ ತಿಂಗಳಷ್ಟೇ ಗುಜರಾತಿನ ಭಯೋತ್ಪಾದಕ ವಿರೋಧಿ ಪಡೆ ಮುಂಬೈ ಮೂಲದ ನೈಜೀರಿಯಾ ಡ್ರಗ್ ಮಾಫಿಯಾದಿಂದ 90 ಲಕ್ಷ ಬೆಲೆ ಬಾಳುವ ಈ ಡ್ರಗ್ ವಶಪಡಿಸಿಕೊಂಡಿತ್ತು.