ಡಿಕೆ ಶಿವಕುಮಾರ್ 
ಪ್ರಧಾನ ಸುದ್ದಿ

ಡಿಕೆ ಶಿವಕುಮಾರ್ ದೇಶದ 2ನೇ ಶ್ರೀಮಂತ ಸಚಿವ

ಕರ್ನಾಟಕದ ಇಂಧನ ಸಚಿವ ಡಿಕೆ ಶಿವಕುಮಾರ ದೇಶದ ಶ್ರೀಮಂತ ಸಚಿವರಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ...

ಬೆಂಗಳೂರು: ಕರ್ನಾಟಕದ ಇಂಧನ ಸಚಿವ ಡಿಕೆ ಶಿವಕುಮಾರ ದೇಶದ ಶ್ರೀಮಂತ ಸಚಿವರಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

ಅಸೋಶಿಯೇಷನ್ ಫಾರ್ ಡೆಮೊಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಪಟ್ಟಿಯಂತೆ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಸಚಿವ ಪೊಂಗುರು ನಾರಾಯಣ ದೇಶದ ಅತ್ಯಂತ ಶ್ರೀಮಂತ ಸಚಿವರೆನಿಸಿಕೊಂಡಿದ್ದಾರೆ.

ಪೊಂಗುರು ನಾರಾಯಣ ಅವರ ಆಸ್ತಿ ಮೌಲ್ಯ 496 ಕೋಟಿಯಷ್ಟಿದ್ದರೆ, ಡಿಕೆಶಿ 251 ಕೋಟಿಯಷ್ಟಿದೆ. ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ನೀಡಿರುವ ಆಸ್ತಿ ಮೌಲ್ಯದ ಮಾಹಿತಿಯನ್ನು ಆಧರಿಸಿ, 29 ವಿಧಾನಸಭೆ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 620 ಸಚಿವರ ಪೈಕಿ 609 ಸಚಿವರನ್ನು ಅಧ್ಯಯನ ನಡೆಸಿ ವರದಿ ತಯಾರಿಸಿತ್ತು.

ವರದಿ ಪ್ರಕಾರ 462 ಸಚಿವರು ಕೋಟ್ಯಧಿಪತಿಗಳು ಎಂದು ತಿಳಿದುಬಂದಿದೆ. ಅರುಣಾಚಲ ಪ್ರದೇಶ, ಪಂಜಾಬ್, ಪಾಂಡಿಚೇರಿಗಳಲ್ಲಿ ಶೇಕಡ 100ರಷ್ಟು ಸಚಿವರು ಕೋಟ್ಯಾಧಿಪತಿಗಳು ಎನಿಸಿಕೊಂಡಿದ್ದಾರೆ. ಇನ್ನು ಕರ್ನಾಟಕದಲ್ಲಿ 97ರಷ್ಟು ಸಚಿವರು ಕೋಟ್ಯಾಧಿಪತಿ ಎನಿಸಿಕೊಂಡಿದ್ದಾರೆ.

ಇನ್ನು ಕರ್ನಾಟಕದ ಸಂತೋಷ್ ಲಾಡ್ 186 ಕೋಟಿ ಆಸ್ತಿಯೊಂದಿಗೆ ಮೂರನೇ ಸ್ಥಾನ. 136 ಕೋಟಿ ಆಸ್ತಿ ಹೊಂದಿರುವ ಎಂಆರ್ ಸೀತಾರಾಂ ಆರನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!