ಕೋಲಾರ: ಅಸ್ಸಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ರಾಜ್ಯದ ಯೋಧ ರಾಜೇಶ್ ವೀರ ಮರಣವನ್ನಪ್ಪಿದ್ದಾರೆ.
ಅಸ್ಸಾಂನ ಕೋಕ್ರಾಝಾರ್ ನ ಮಾರುಕಟ್ಟೆ ಪ್ರದೇಶದಲ್ಲಿ ನಾಲ್ವರು ಶಂಕಿತ ಭಯೋತ್ಪಾದಕರು ಏಕಾಏಕಿ ಜನರ ಮೇಲೆ ಗ್ರೇನೆಡ್ ಹಾಗೂ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಕರ್ನಾಟಕದ ಕೋಲಾರದ ಕಿತ್ತಂಡೂರು ಗ್ರಾಮದ ರಾಮಯ್ಯರ ಪುತ್ರ 24 ರಾಜೇಶ್ ಹುತಾತ್ಮರಾಗಿದ್ದಾರೆ.
ಕಳೆದ ಮೂರು ವರ್ಷದಿಂದ ರಾಜೇಶ್ ಗಡಿ ಭದ್ರತಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಸಂಜೆ ಗ್ರಾಮಕ್ಕೆ ಪಾರ್ಥಿವ ಶರೀರ ಬರಲಿದ್ದು ರಾಜೇಶ್ ಕುಟುಂಬ ದುಖಃದ ಮಡುವಿನಲ್ಲಿದೆ.
ಶಂಕಿತ ಉಗ್ರರ ದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.