ಪ್ರಧಾನ ಸುದ್ದಿ

100ರೂ ಲಂಚ ನೀಡಲು ನಿರಾಕರಣೆ; ಕಾರ್ಮಿಕರನ್ನು ಸಾಯುವಂತೆ ಥಳಿಸಿದ ಉತ್ತರಪ್ರದೇಶ ಪೊಲೀಸರು

Guruprasad Narayana
ಮೈನ್ ಪುರಿ (ಉತ್ತರ ಪ್ರದೇಶ): 100ರೂ ಲಂಚ ನೀಡಲು ನಿರಾಕರಿಸಿದ್ದಕ್ಕೆ ಇಬ್ಬರು ಮೈನ್ ಪುರಿ ಕಾರ್ಮಿಕರನ್ನು ಉತ್ತರಪ್ರದೇಶ ಪೊಲೀಸರು ಮನಬಂದಂತೆ ಥಳಿಸಿದ್ದರಿಂದ ಅವರು ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ನಡೆದಿದೆ ಎಂದು ಆರೋಪಿಸಲಾಗಿದೆ. 
ಐದು ಕಾರ್ಮಿಕರಲ್ಲಿ ಒಬ್ಬರು ಹೇಳುವಂತೆ ಪೊಲೀಸ್ ಅಧಿಕಾರಿಗಳು ಪ್ರತಿದಿನ ಈ ಪ್ರದೇಶದಲ್ಲಿ ಲಂಚ ತೆಗೆದುಕೊಳ್ಳಲು ಬರುತ್ತಾರೆ "ನಾವು ಲಂಚ ನೀಡಲು ನಿರಾಕರಿಸಿದ್ದಕ್ಕೆ ನಾಲ್ಕು ಜನ ಪೊಲೀಸರು ನಮ್ಮನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಅವರು ನಮಗೆ ಕೆಟ್ಟ ರೀತಿಯಲ್ಲಿ ಥಳಿಸಿದರು" ಎಂದು ಬೀರಬಲ್ ಎನ್ನುವ ಕಾರ್ಮಿಕ ಹೇಳಿದ್ದಾರೆ. 
ಆರೋಪಿ ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು  ಮೈನ್ ಪುರಿ ಪೊಲೀಸ್ ಸೂಪರಿಂಟೆಂಡೆಂಟ್ ದೇವರಾಜನ್ ವರ್ಮಾ ಹೇಳಿದ್ದರೆ. 
"ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸಲಿದ್ದೇವೆ ಮತ್ತು ಆರೋಪಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಿದ್ದೇವೆ" ಎಂದು ವರ್ಮಾ ವರದಿಗಾರರಿಗೆ ತಿಳಿಸಿದ್ದಾರೆ. 
"ಸುಮಾರು ಬೆಳಗ್ಗೆ 4 ಘಂಟೆಗೆ ಈ ಘಟನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಕಳ್ಳತನದ ಘಟನೆಗಳು ವರದಿಯಾಗಿದ್ದರಿಂದ ಪೊಲೀಸರು ಗಸ್ತು ನಡೆಸುತ್ತಿದ್ದರು. ಪೊಲೀಸ್ ಅಡೆಗೆ ಇಟ್ಟಿಗೆ ತುಂಬಿದ ಟ್ರ್ಯಾಕ್ಟರ್ ಢಿಕ್ಕಿ ಹೊಡೆದಿದೆ. ಆಗ ಪೊಲೀಸರು ಟ್ರ್ಯಾಕ್ಟರ್ ನಿಲ್ಲಿಸಿ ತಪಾಸಣೆಗೆ ಮುಂದಾಗಿದ್ದರು" ಎಂದು ಕೂಡ ಅವರು ತಿಳಿಸಿದ್ದಾರೆ. 
SCROLL FOR NEXT