ಲಖನೌ: ಬಿ ಎಸ್ ಪಿ ಪಕ್ಷದ ಹಿರಿಯ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಒಂದು ದಿನದ ನಂತರ ಈಗ ಸಮಾಜವಾದಿ ಪಕ್ಷದ ಒಬ್ಬ ಮತ್ತು ಕಾಂಗ್ರೆಸ್ ನ ಮೂವರು ಶಾಸಕರು ಬುಧವಾರ ಬಹುಜನ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ರಾಮಪುರ್ ಜಿಲ್ಲೆಯ ಸ್ವರ್ ಕ್ಷೇತ್ರದ ಶಾಸಕ ನವಾಬ್ ಕ್ವಾಸಿಂ ಅಲಿ ಮತ್ತು ಅಮೇಥಿಯ ತಿಲೊಲಿಯ ಶಾಸಕ ಮೊಹಮದ್ ಮುಸ್ಲಿಂ ಷರತ್ತುರಹಿತವಾಗಿ ಬಿ ಎಸ್ ಪಿ ಪಕ್ಷ ಸೇರಿದ್ದಾರೆ ಎಂದು ಬಿ ಎಸ್ ಪಿ ಮುಖಂಡ ನಸಿಮುದ್ದೀನ್ ಹೇಳಿದ್ದಾರೆ.
ಅವರಿಗೆ ಬಿ ಎಸ್ ಪಿ ಪಕ್ಷದಿಂದ ಟಿಕೆಟ್ ನೀಡಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.
ಹಾಗೆಯೇ ಬುಲಂದ್ ಶಹರ್ ನ ಕಾಂಗ್ರೆಸ್ ಶಾಸಕ ದಿಲನಾವಾಜ್ ಖಾನ್, ಬುಧನಾ (ಮುಜಾಫರ್ ನಗರ) ಸಮಾಜವಾದಿ ಪಕ್ಷದ ಶಾಸಕ ಆಲಂ ಖಾನ್ ಮತ್ತು ಬಿಜೆಪಿ ಪಕ್ಷದ ಮಾಜಿ ಸಚಿವ ಅವದೇಶ್ ವರ್ಮಾ ಕೂಡ ಬಿ ಎಸ್ ಪಿ ಪಕ್ಷ ಸೇರಿರುವುದಾಗಿ ನಸಿಮುದ್ದೀನ್ ಹೇಳಿದ್ದಾರೆ.