ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

'ಗಡಿಯಲ್ಲಿ ಭಯೋತ್ಪಾದನಾ ಚಟುವಟಿಕೆ'ಗಳನ್ನು ಕೊನೆಗಾಣಿಸಿ: ಪಾಕಿಸ್ತಾನ ದಿನಪತ್ರಿಕೆ

ಭಾರತದ ಭದ್ರತಾ ಕಳವಳವನ್ನು ಒಪ್ಪಿಕೊಂಡು 'ಗಡಿಯಲ್ಲಿ ಭಯೋತ್ಪಾದನಾ ಚಟುವಟಿಕೆ'ಗಳನ್ನು ನಡೆಸುವವರನ್ನು ಪಾಕಿಸ್ತಾನ ತಡೆಯಬೇಕು ಎಂದು ಪಾಕಿಸ್ತಾನದ ಮುಂಚೂಣಿ ದಿನಪತ್ರಿಕೆ ಗುರುವಾರ ಹೇಳಿದೆ.

ಇಸ್ಲಮಾಬಾದ್: ಭಾರತದ ಭದ್ರತಾ ಕಳವಳವನ್ನು ಒಪ್ಪಿಕೊಂಡು 'ಗಡಿಯಲ್ಲಿ ಭಯೋತ್ಪಾದನಾ ಚಟುವಟಿಕೆ'ಗಳನ್ನು ನಡೆಸುವವರನ್ನು ಪಾಕಿಸ್ತಾನ ತಡೆಯಬೇಕು ಎಂದು ಪಾಕಿಸ್ತಾನದ ಮುಂಚೂಣಿ ದಿನಪತ್ರಿಕೆ ಗುರುವಾರ ಹೇಳಿದೆ.

ಇದು ಬಗೆಹರಿಯದ ಹೊರತು ಪಾಕಿಸ್ತಾನ ಮತ್ತು ಭಾರತ ಮಾತುಕತೆಯಿಂದ ತಮ್ಮ ವಿವಾದಗಳನ್ನು ಬಗೆಹರಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಡೈಲಿ ಟೈಮ್ಸ್ ಸಂಪಾದಕೀಯದಲ್ಲಿ ಹೇಳಿದೆ.

"ಕಾಶ್ಮೀರಿ ಚಳುವಳಿಗೆ ಪಾಕಿಸ್ತಾನ ಬೆಂಬಲ ರಾಜತಾಂತ್ರಿಕ ಮಟ್ಟದಲ್ಲಿ ಮಾತ್ರ ಇರಬೇಕು ಮತ್ತು ಶಸ್ತ್ರಾಸ್ತ್ರ ಹೋರಾಟವನ್ನು ಬೆಂಬಲಿಸುವ ಯಾವುದೇ ಭಯೋತ್ಪಾದಕ ಗುಂಪನ್ನು ಬೆಂಬಲಿಸಬಾರದು" ಎಂದು ಪತ್ರಿಕೆ ಹೇಳಿದೆ.

ಇದೆ ಸಮಯದಲ್ಲಿ ಪಾಕಿಸ್ತಾನದ ಭದ್ರತಾ ಕಳವಳವನ್ನು ಭಾರತ ಗುರುತಿಸಿ ಮಾತುಕತೆಯಲ್ಲಿ ಕಾಶ್ಮೀರವನ್ನು ಒಳಗೊಳ್ಳದ ತನ್ನ ಹಠವನ್ನು ಬಿಡಬೇಕು ಎಂದು ಕೂಡ ಪತ್ರಿಕೆ ಹೇಳಿದೆ.

ಪಾಕಿಸ್ತಾನ ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ ಒದಗಿಸುತ್ತಿರುವುದಾಗಿ ಹಾಗು ಜಮ್ಮು ಕಾಶ್ಮೀರಕ್ಕೆ ಉಗ್ರಗಾಮಿಗಳನ್ನು ಕಳುಹಿಸುತ್ತಿರುವುದಾಗಿ ಭಾರತ ಆರೋಪಿಸುತ್ತಿದೆ. ಆದರೆ ಇಸ್ಲಾಮಾಬಾದ್, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳಿಗೆ ಕೇವಲ ರಾಜತಾಂತ್ರಿಕ ಬೆಂಬಲ ನೀಡುತ್ತಿರುವುದಾಗಿ ಹೇಳುತ್ತದೆ.

"ಪಾಕಿಸ್ತಾನ ಮತ್ತು ಭಾರತ ಸಹಕರಿಸಿದರೆ ಮಾತ್ರ ಕಾಶ್ಮೀರದಲ್ಲಿ ಏಳಿಗೆ ಸಾಧ್ಯ" ಎಂದು ಕೂಡ ಅದು ಹೇಳಿದೆ.

ಕಾಶ್ಮೀರ ಕಣಿವೆಯಲ್ಲಿ ನೆಲೆಸಿರುವ ಗಲಭೆಗಳ ನಡುವೆಯೂ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ನವದೆಹಲಿಯ ದೀರ್ಘ ಕಾಲದ ದೃಷ್ಟಿಕೋನವನ್ನು ಪುನರಿಚ್ಛಿಸಿರುವುದಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೂಡ ದಿನಪತ್ರಿಕೆ ಟೀಕಿಸಿದೆ.

ಮೋದಿ ಅವರ ಹೇಳಿಕೆಗಳು "ಕಾಶ್ಮೀರಿ ಜನರ ಸಮರ್ಥನೀಯ ಹೋರಾಟದ ಬಗ್ಗೆ ಜಾಣ ಮರೆವಿಕೆಯಿಂದ ಕೂಡಿವೆ"

"ಪಾಕಿಸ್ತಾನ ಮತ್ತು ಭಾರತದ ನಡುವೆ ಇರುವ ಶತ್ರುತ್ವದ ದೃಷ್ಟಿಯಿಂದ ಕಾಶ್ಮೀರ ಸಮಸ್ಯೆಯನ್ನು ನೋಡುತ್ತಿರುವುದೇ ದುರದೃಷ್ಟಕರ"

"ಕಣಿವೆಯ ಬಗ್ಗೆ ಮುಂದೆ ನಡೆಯಲಿರುವ ಮಾತುಕತೆಯಲ್ಲಿ ಕಾಶ್ಮೀರಿಗಳನ್ನು ಸಮಾನರಾಗಿ ಒಳಗೊಳ್ಳಬೇಕು" ಎಂದು ಕೂಡ ದಿನಪತ್ರಿಕೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!