ನವದೆಹಲಿ: ಇತರ ರಾಜ್ಯಗಳಿಂದ ತರಲಾಗುವ ಗೋಮಾಂಸ ಸೇವಿಸುವುದಕ್ಕೆ ಅವಕಾಶ ನೀಡಿ ಮಹಾರಾಷ್ಟ್ರ ಸರ್ಕಾರಕ್ಕೆ ಆದೇಶ ನೀಡಿದ್ದ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬುಧವಾರ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಗೋಹತ್ಯೆ ಕಾನೂನಿನಲ್ಲಿ ಅವಕಾಶ ನೀಡಿರುವ ರಾಜ್ಯಗಳಿಂದ ತಂದ ಬೀಫ್ ಸೇವಿಸಲು ಅವಕಾಶ ನೀಡಿದ್ದ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅಖಿಲ ಭಾರತ ಕೃಷಿ ಗೋ ಸೇವಾ ಸಂಘ ಸಲ್ಲಿಸಿದ್ದ ಅರ್ಜಿಯ ಪರವಾಗಿ ವಕೀಲ ಮನೀಶ್ ಸಿಂಗ್ವಿ ಮಾಡಿದ ವಾದವನ್ನು ಆಲಿಸಿದ ನ್ಯಾಯಾಧೀಶರಾದ ಎ ಕೆ ಸಿಕ್ರಿ ಮತ್ತು ಡಿ ವೈ ಚಂದ್ರಚೂಡ್ ಒಳಗೊಂಡ ಅಪೆಕ್ಸ್ ನ್ಯಾಯಪೀಠ ನೋಟಿಸ್ ನೀಡಿದೆ.
ಈನಡುವೆ 30 ವ್ಯಕ್ತಿಗಳನ್ನೊಳಗೊಂಡ ಸಂಘ ಮಹಾರಾಷ್ಟ ಪ್ರಾಣಿ ರಕ್ಷಣೆ (ತಿದ್ದುಪಡಿ) ಕಾಯ್ದೆ, 2015 ರಡಿ ಗೋಹತ್ಯೆ ಮತ್ತು ಬೀಫ್ ಸೇವನೆಯನ್ನು ನಿಷೇಧಿಸಿರುವ ಕಾನೂನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಆಹಾರವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಉಳಿಸುವಂತೆ ಈ ಸಂಘ ಮನವಿ ಮಾಡಿದೆ.
ಮೇ 6 ರಂದು ಹೈಕೋರ್ಟ್ ಈ ಆದೇಶ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics