ನವದೆಹಲಿ: ಹೆಸರಾಂತ ಆರ್ಥಿಕ ತಜ್ಞ ಉರ್ಜಿತ್ ಪಟೇಲ್ ಅವರು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ)ನ ನೂತನ ಗವರ್ನರ್ ಆಗಿ ನೇಮಕಗೊಂಡಿದ್ದು, ಸೆಪ್ಟೆಂಬರ್ 4ರಂದು ಹಾಲಿ ಗವರ್ನರ್ ರಘುರಾಮ್ ರಾಜನ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಪ್ರಸ್ತೂತ ಆರ್ ಬಿಐ ಉಪ ಗವರ್ನರ್ ಆಗಿರುವ ಪಟೇಲ್ ಅವರನ್ನೇ ಕೇಂದ್ರ ಸರ್ಕಾರ ಮೂರು ವರ್ಷಗಳ ಅವಧಿಗೆ ಗವರ್ನರ್ ಹುದ್ದೆಗೆ ನೇಮಕ ಮಾಡಿದೆ.
ಗವರ್ನರ್ ರಘುರಾಂ ರಾಜನ್ ಅವರ ಅಧಿಕಾರಾವಧಿ ಸೆಪ್ಟೆಂಬರ್ 4ರಂದು ಮುಕ್ತಾಯಗೊಳ್ಳಲಿದ್ದು, ಅಂದೇ 52 ವರ್ಷದ ಉರ್ಜಿತ್ ಪಟೇಲ್ ಅವರು ನೂತನ ಗವರ್ನರ್ ಆಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.
ಮಾಜಿ ಮಹಾ ಲೇಖಪಾಲ (ಸಿಎಜಿ) ವಿನೋದ್ ರೈ, ಭಾರತೀಯ ಸ್ಟೇಟ್ ಬ್ಯಾಂಕ್ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಸೇರಿದಂತೆ ಅನೇಕರು ಆರ್ ಬಿಐ ಗವರ್ನರ್ ಹುದ್ದೆ ರೇಸ್ ನಲ್ಲಿದ್ದರು. ಆದರೆ ಅಂತಿಮವಾಗಿ ಹಣದುಬ್ಬರಕ್ಕೆ ಕಡಿವಾಣ ಹಾಕುವ ವಿಷಯದಲ್ಲಿ ರಘುರಾಮ್ ರಾಜನ್ ಅವರಿಗೆ ನೆರವಾಗಿದ್ದ ಉರ್ಜಿತ್ ಪಟೇಲ್ ಅವರು ಆಯ್ಕೆಯಾಗಿದ್ದಾರೆ.
ರಾಜನ್ ಅವರಿಗೆ ನಿಕಟವರ್ತಿ ಆಗಿರುವ ಪಟೇಲ್ ಅವರು ಅಮೆರಿಕದ ಯಾಲೆ ವಿವಿಯಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ನಲ್ಲಿ ಬಿಎ ಪದವಿ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics